ದೇಶ

ನೋಟುಗಳ ನಿಷೇಧ ಆದೇಶ ಕಾನೂನುಬಾಹಿರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ

Manjula VN

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರ ಕಾನೂನುಬಾಹಿರವಾಗಿದ್ದು, ನೋಟು ನಿಷೇಧ ಪ್ರಕ್ರಿಯೆಯನ್ನು ಆರಂಭಿಸಬಾರದಿತ್ತು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು 4:1 ಬಹುಮತದೊಂದಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ನೋಟು ನಿಷೇಧ ನಿರ್ಧಾರ ಎತ್ತಿಹಿಡಿದ ಸಂದರ್ಭದಲ್ಲಿ ಜಸ್ಟಿಸ್ ನಾಗರತ್ನ  ತಮ್ಮ ತೀವ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನವೆಂಬರ್ 8, 2016 ರ ಕೇಂದ್ರದ ಅಧಿಸೂಚನೆಯನ್ನು "ಕಾನೂನುಬಾಹಿರ" ಎಂದು ಕರೆದಿರುವ ನಾಗರತ್ನ ಅವರು, "ನನ್ನ ಅಭಿಪ್ರಾಯದಲ್ಲಿ ನವೆಂಬರ್ 8 ರ ಅಧಿಸೂಚನೆಯ ಮೂಲಕ ನೋಟು ಅಮಾನ್ಯೀಕರಣದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ. ನೋಟು ನಿಷೇಧ ಕಾನೂನು ವಿರುದ್ದವಾಗಿ ಚಲಾಯಿಸಿದ ಅಧಿಕಾರ. ಹೀಗಾಗಿ ಅದು ಕಾನೂನು ಬಾಹಿರ. ಅದನ್ನು ಜಾರಿಗೊಳಿಸಿದ ರೀತಿ ಕಾನೂನಿಗೆ ಅನುಸಾರವಾಗಿಲ್ಲ'' ಎಂದು ಹೇಳಿದ್ದಾರೆ.

"ಆರ್‌ಬಿಐ ಕಾಯಿದೆಯ ಪ್ರಕಾರ, ನೋಟು ನಿಷೇಧ ಶಿಫಾರಸು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಂಡಳಿಯಿಂದ ಸ್ವತಂತ್ರವಾಗಿ ಬರಬೇಕು ಎನ್ನುವುದು ಅರ್ಜಿದಾರರ ವಾದದ.  ಆದರೆ, ಈ ಪ್ರಕರಣದಲ್ಲಿ ಕೇಂದ್ರವು ನವೆಂಬರ್ 7 ರಂದು ಆರ್‌ಬಿಐಗೆ ಪತ್ರ ಬರೆದು ಅಂತಹ ಶಿಫಾರಸಿಗೆ ಸಲಹೆ ನೀಡಿತು ಎಂದು ತಿಳಿಸಿದರು.

SCROLL FOR NEXT