ಏರ್ ಮಾರ್ಷಲ್ ಮನವೇಂದ್ರ ಸಿಂಗ್ 
ದೇಶ

ಅಗ್ನಿಪಥ್ ಯೋಜನೆಯಡಿ ಮೊದಲ ಬ್ಯಾಚ್‌ನ ತರಬೇತಿ ಜನವರಿ 1 ರಿಂದ ಆರಂಭ

ಅಗ್ನಿಪಥ್‌ನ ಹೊಸ ನೇಮಕಾತಿ ಯೋಜನೆಯಡಿ ಭಾರತೀಯ ಸೇನೆ ಮತ್ತು ವಾಯುಪಡೆಗೆ ಆಯ್ಕೆಯಾಗಿರುವ ಯುವಕರು ತಮ್ಮ ತಮ್ಮ ತರಬೇತಿ ಕೇಂದ್ರಗಳನ್ನು ತಲುಪಿದ್ದು, ಭಾರತೀಯ ವಾಯುಸೇನೆ ಸೇರುವವರಿಗೆ...

ನವದೆಹಲಿ: ಅಗ್ನಿಪಥ್‌ನ ಹೊಸ ನೇಮಕಾತಿ ಯೋಜನೆಯಡಿ ಭಾರತೀಯ ಸೇನೆ ಮತ್ತು ವಾಯುಪಡೆಗೆ ಆಯ್ಕೆಯಾಗಿರುವ ಯುವಕರು ತಮ್ಮ ತಮ್ಮ ತರಬೇತಿ ಕೇಂದ್ರಗಳನ್ನು ತಲುಪಿದ್ದು, ಭಾರತೀಯ ವಾಯುಸೇನೆ ಸೇರುವವರಿಗೆ ಭಾನುವಾರದಿಂದಲೇ ತರಬೇತಿ ಆರಂಭವಾಗಿದೆ.

ಏರ್‌ಮೆನ್ ಟ್ರೈನಿಂಗ್ ಸ್ಕೂಲ್(ಎಟಿಎಸ್) ಬೆಳಗಾವಿಯಲ್ಲಿ "ಅಗ್ನಿವೀರ್ ವಾಯು'ನ ಮೊದಲ ಬ್ಯಾಚ್‌ನ ತರಬೇತಿ ಇಂದಿನಿಂದ ಪ್ರಾರಂಭವಾಗಿದೆ ಎಂದು ವಾಯುಪಡೆ ಮಾಹಿತಿ ನೀಡಿದೆ.

ತರಬೇತಿ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಶಾಲೆಗೆ ಭೇಟಿ ನೀಡಿ ಹೊಸದಾಗಿ ನೇಮಕಗೊಂಡ ಬ್ಯಾಚ್ ಅನ್ನು ಉದ್ದೇಶಿಸಿ ಮಾತನಾಡಿದರು.

ಅಲ್ಲದೆ, ತರಬೇತಿ ಮುಗಿದ ನಂತರ ಸೈನಿಕರಾಗಿ ಸೇನೆಗೆ ಸೇರಲು ದೇಶಾದ್ಯಂತ ಅಗ್ನಿಪಥ್ ಯೋಜನೆ ಅಡಿ ನೇಮಕಗೊಂಡ ಯುವಕರು ವಿವಿಧ ತರಬೇತಿ ಕೇಂದ್ರಗಳಿಗೆ ವರದಿ ಮಾಡಿಕೊಂಡಿದ್ದಾರೆ. ಇಂದಿನಿಂದ ತರಬೇತಿ ನೀಡುವುದಾಗಿ ಸೇನಾ ಮುಖ್ಯಸ್ಥ ಜನರಲ್ ಎಂಕೆ ಪಾಂಡೆ ಕಳೆದ ವಾರ ತಿಳಿಸಿದ್ದರು.

ಭಾರತೀಯ ನೌಕಾಪಡೆಯು ಮಹಿಳೆಯರಿಗೂ ತರಬೇತಿಗೆ ಅವಕಾಶ ನೀಡಿದ್ದು, ಒಡಿಶಾದ ಐಎನ್ಎಸ್ ಚಿಲ್ಕಾದಲ್ಲಿರುವ ನಾವಿಕ ತರಬೇತಿ ಸಂಸ್ಥೆಯಲ್ಲಿ 3,000 ಅಗ್ನಿವೀರ್‌ಗಳು ನವೆಂಬರ್‌ನಲ್ಲಿ ತರಬೇತಿ ಪಡೆದಿದ್ದು, ಅದರಲ್ಲಿ 341 ಮಹಿಳೆಯರು ಸೇರಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಮೂರು ವರ್ಷಗಳಿಂದ ಯಾವುದೇ ಸೇನಾ ನೇಮಕಾತಿ ನಡೆಯದ ಕಾರಣ ಈ ನೇಮಕಾತಿಯ ಆರಂಭವು ಸಶಸ್ತ್ರ ಪಡೆಗಳಿಗೆ ಮಹತ್ವದ್ದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT