ಪ್ರಿಯಾಂಕಾಗೆ ಮುತ್ತಿಟ್ಟ ರಾಹುಲ್ 
ದೇಶ

'ಅಣ್ಣ ತಂಗಿಯರ ಈ ಬಂಧ-ಜನುಮ-ಜನುಮಗಳ ಅನುಬಂಧ': ವೇದಿಕೆ ಮೇಲೆ ಮುದ್ದು ತಂಗಿಗೆ ಮುತ್ತಿಟ್ಟ ಅಣ್ಣ; ರಾಹುಲ್-ಪ್ರಿಯಾಂಕಾ ಪ್ರೀತಿಗೆ ನೆಟ್ಟಿಗರು ಫಿದಾ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನ ಎಷ್ಟು ಪ್ರೀತಿಸುತ್ತಾರೆ. ಇವರಿಬ್ಬರ ಬಾಂಧವ್ಯ ಎಂಥದ್ದು ಅನ್ನೋದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ದೆಹಲಿ: ಭಾರತ್ ಜೋಡೋ ಯಾತ್ರೆ ದೆಹಲಿಯಿಂದ ಉತ್ತರ ಪ್ರದೇಶ ಪ್ರವೇಶಿಸುತ್ತಿದ್ದಂತೆ ಲೋನಿ ಗಡಿಯಲ್ಲಿ ಯಾತ್ರೆಯನ್ನು ಬರಮಾಡಿಕೊಂಡಿದ್ದ ಪ್ರಿಯಾಂಕಾ ಗಾಂಧಿ, ತಮ್ಮ ಸಹೋದರನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನ ಎಷ್ಟು ಪ್ರೀತಿಸುತ್ತಾರೆ. ಇವರಿಬ್ಬರ ಬಾಂಧವ್ಯ ಎಂಥದ್ದು ಅನ್ನೋದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಭಾರತ್ ಜೋಡೋ ಯಾತ್ರೆಯ ವೇದಿಕೆ ಮೇಲೆ ರಾಹುಲ್ ಗಾಂಧಿ ಅವರು ತಮಗಿಂತ 2 ವರ್ಷ ಚಿಕ್ಕವರಾದ ತಂಗಿ ಪ್ರಿಯಾಂಕಾರಿಗೆ ಅಪ್ಪಿ ಸಿಹಿ ಮುತ್ತುಗಳನ್ನು ನೀಡಿರುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು ಇದು ಎಲ್ಲೆಡೆ ವೈರಲ್ ಆಗುತ್ತಿದೆ. ನೆಟ್ಟಿಗರು ಅಣ್ಣ-ತಂಗಿಯ ಪ್ರೀತಿ, ಬಾಂಧವ್ಯಕ್ಕೆ ಫಿದಾ ಆಗಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ “ಭಾರತ್ ಜೋಡೋ ಯಾತ್ರೆಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿಯವರೊಂದಿಗೆ ಸೇರಿಕೊಂಡರು. ಬಳಿಕ ಭಾರತ್ ಜೋಡೋ ಯಾತ್ರೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ತಂಗಿಯ ಭುಜದ ಮೇಲೆ ಕೈಯಿಟ್ಟು ಏನೋ ಹೇಳಿದರು.

ಆಗ ಪ್ರಿಯಾಂಕಾ ಗಾಂಧಿ ವಾದ್ರಾ ಮುಗುಳ್ನಕ್ಕರು. ನಂತರ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನು ತಮ್ಮ ಹತ್ತಿರ ಎಳೆದುಕೊಂಡು, ಅಪ್ಪಿ ಅವರ ಕೆನ್ನೆಗಳಿಗೆ ಮುತ್ತಿಟ್ಟು ನಕ್ಕರು. ಈ ಪ್ರೀತಿಯ ಕ್ಷಣಗಳನ್ನು ವ್ಯಕ್ತಪಡಿಸುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

ನೆರೆದಿದ್ದವರು ಒನ್ಸ್‌ ಮೋರ್ ಅಂದ್ರೂ ರಾಹುಲ್ ಗಾಂಧಿ ಅವರನ್ನು ನಿರಾಸೆಗೊಳಿಸಲಿಲ್ಲ.. ಪ್ರಿಯಾಂಕಾ ಅವರನ್ನ ಬಿಗಿದಪ್ಪಿಕೊಂಡು ಖುಷಿಯಲ್ಲಿ ತೇಲಾಡಿದ್ರು.. ಅಣ್ಣ-ತಂಗಿಯ ಈ ಸಲುಗೆಯ ದೃಶ್ಯ ನೋಡುಗರು ಉಬ್ಬೇರುವಂತೆ ಮಾಡಿದ್ದಂತೂ ಸುಳ್ಳಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ಮೀರಾಬಾಯಿ ಚಾನುಗೆ ಬೆಳ್ಳಿ ಪದಕ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!

ಕೊನೆಗೂ ಭಾರತವೇ ಬೇಕಾಯ್ತು: Iran ಸಮಸ್ಯೆಗೆ IMEEC ಒಂದೇ ಪರಿಹಾರ- Donald Trump

ಭೀಕರ ಅಪಘಾತ; ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಪಿಕಪ್ ಕ್ರೇನ್, Video

ಜಪಾನ್ ವಿರುದ್ಧ ಗೋಲ್ಡನ್ ಡಕ್; Unwanted Record ಸೃಷ್ಟಿಸಿದ ಅಭಿಷೇಕ್ ಶರ್ಮಾ: ಈ ದಾಖಲೆ ಮುರಿಯುವುದು ಯಾರಿಗೂ ಅಸಾಧ್ಯ!