ಸಾಂದರ್ಭಿಕ ಚಿತ್ರ 
ದೇಶ

ಉಗ್ರರ ಹುಟ್ಟಡಗಿಸಿದ ಸೇನೆ: ಪೂಂಚ್ ಎನ್ಕೌಂಟರ್ ನಲ್ಲಿ ಇಬ್ಬರು ಶಂಕಿತರು ಹತ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಭಾರತೀಯ ಸೇನೆ ಭಾನುವಾರ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಭಾರತೀಯ ಸೇನೆ ಭಾನುವಾರ ಇಬ್ಬರು ಶಂಕಿತ ಉಗ್ರರನ್ನು ಹೊಡೆದುರುಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಗಡಿದಾಟಲು ಯತ್ನಿಸುತ್ತಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ಉಗ್ರ ಸಂಘಟನೆ ಸ್ಥಾಪಿಸಲು ಸಂಚು ರೂಪಿಸಿದ್ದ ಅಸ್ಸಾಂ ಮಾಜಿ ಶಾಸಕ ಸೇರಿ ಮೂವರ ಬಂಧನ
  
ಜಿಲ್ಲೆಯ ಬಾಲಕೋಟ್ ಸೆಕ್ಟರ್‌ನಲ್ಲಿ ಶನಿವಾರ ತಡರಾತ್ರಿ ಶಂಕಿತ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಮುಂದಿರುವ ಹಳ್ಳಿಯೊಂದರಲ್ಲಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಶಂಕಿತ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಹೇಳಿದರು.

ಇಂದು ಬೆಳಗ್ಗೆ ಸೇನೆಯು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಹತರಾದ ಭಯೋತ್ಪಾದಕರ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ: 6 ಅಂತಸ್ತಿನ ಕಟ್ಟಡ ಕುಸಿತ; ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

ಮಧ್ಯಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 12 ಮಂದಿ ಸಾವು, ಹಲವರ ಸ್ಥಿತಿ ಗಂಭೀರ! ಕಠಿಣ ಕ್ರಮಕ್ಕೆ ಸಿಎಂ ಆದೇಶ

ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗದ ಕಾರು ಡಿಕ್ಕಿ; 3 ವರ್ಷದ ಮಗು ಸೇರಿ ಮೂವರ ಸಾವು

Odisha Literary Festival 2026: ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧಕರನ್ನು ಮರೆತಿರುವುದಕ್ಕೆ ವಸಾಹತುಶಾಹಿ ಮನಸ್ಥಿತಿಯೇ ಕಾರಣ! ಆನಂದ್ ರಂಗನಾಥನ್

ಹುಬ್ಬಳ್ಳಿ: ʻಗೌರಿ ಲಂಕೇಶ್ʼ ಕೊಲೆ ಕೇಸ್‌ ಹಾಗೂ ಗಾಂಜಾ ಕೇಸ್ ಆರೋಪಿಯಿಂದ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ! ವಿವಾದ