ರಾಹುಲ್ ಗಾಂಧಿ 
ದೇಶ

ಭಯ, ದ್ವೇಷ - ನಿರುದ್ಯೋಗ, ಹಣದುಬ್ಬರದ ವಿರುದ್ಧ ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ತಮ್ಮ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ದೇಶದ ಎಲ್ಲೆಡೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಪಾದಯಾತ್ರೆಯು ಸಮಾಜದಲ್ಲಿ ಹರಡುತ್ತಿರುವ ದ್ವೇಷ ಮತ್ತು ಭಯದ ವಿರುದ್ಧ ಹಾಗೂ ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.

ಕುರುಕ್ಷೇತ್ರ: ತಮ್ಮ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ದೇಶದ ಎಲ್ಲೆಡೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಪಾದಯಾತ್ರೆಯು ಸಮಾಜದಲ್ಲಿ ಹರಡುತ್ತಿರುವ ದ್ವೇಷ ಮತ್ತು ಭಯದ ವಿರುದ್ಧ ಹಾಗೂ ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.

ದೇಶದ ನಿಜವಾದ ಧ್ವನಿಯನ್ನು ಜನರಿಗೆ ಕೇಳುವಂತೆ ಮಾಡುವುದು ಈ ಯಾತ್ರೆಯ ಉದ್ದೇಶವಾಗಿದೆ. ಭಾರತ್ ಜೋಡೋ ಯಾತ್ರೆಗೆ ಎಲ್ಲೆಡೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹರಿಯಾಣದ ಕುರುಕ್ಷೇತ್ರದ ಬಳಿಯ ಸಮನಾದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.

ಸದ್ಯ ಹರಿಯಾಣದ ಮೂಲಕ ಹಾದು ಹೋಗುತ್ತಿರುವ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ್ ಜೋಡೋ ಯಾತ್ರೆಯ ಕುರಿತು ಮಾತನಾಡಿದ ಅವರು, 'ಇಲ್ಲಿಯವರೆಗಿನ ಪ್ರಯಾಣದ ಅವಧಿಯಲ್ಲಿ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ. ದೇಶದ ಹೃದಯದಲ್ಲಿ ಏನಿದೆಯೋ ಅದನ್ನು ನೇರವಾಗಿ (ಜನರೊಂದಿಗೆ ಸಂವಹನ ನಡೆಸುವುದು) ಕೇಳಬೇಕು. ಯಾತ್ರೆಗೆ ಹರಿಯಾಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಶಕ್ತಿಯುತ, ಉತ್ಸಾಹಭರಿತ ಪ್ರತಿಕ್ರಿಯೆಯಾಗಿದೆ' ಎಂದು ಅವರು ಹೇಳಿದರು.

ಯಾತ್ರೆಯ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ ಗಾಂಧಿ, 'ಕೇರಳದಲ್ಲಿ ನಮಗೆ ದೊರೆತ ಪ್ರತಿಕ್ರಿಯೆಯು ಬಿಜೆಪಿ ಆಡಳಿತದ ರಾಜ್ಯವಾದ ಕರ್ನಾಟಕದಲ್ಲಿ ನಮಗೆ ಸಿಗುವುದಿಲ್ಲ ಎಂದು ಜನರು ಹೇಳಿದರು. ಆದರೆ, ಅಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ನಂತರ ಅವರು ಹೇಳಿದರು ಯಾತ್ರೆಗೆ ದಕ್ಷಿಣ ಭಾರತದಲ್ಲಿ ಪ್ರತಿಕ್ರಿಯೆ ಸಿಕ್ಕಿತು. ಆದರೆ, ಅದು ಮಹಾರಾಷ್ಟ್ರವನ್ನು ತಲುಪಿದಾಗ ಅದಕ್ಕೆ ಪ್ರತಿಕ್ರಿಯೆ ಸಿಗುವುದಿಲ್ಲ ಎಂದರು. ನಾವು ಮಹಾರಾಷ್ಟ್ರವನ್ನು ತಲುಪಿದಾಗ ನಮಗೆ ದಕ್ಷಿಣಕ್ಕಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತು' ಎಂದರು.

'ಯಾತ್ರೆಯು ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಾದುಹೋದಾಗ ಉತ್ತಮ ಪ್ರತಿಕ್ರಿಯೆ ಸಿಗುವುದಿಲ್ಲ ಎಂದು ಹೇಳಲಾಯಿತು. ಆದರೆ, ಮಧ್ಯಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪ್ರತಿಕ್ರಿಯೆ ಕಂಡುಬಂದಿದೆ. ನಾವು ಹರಿಯಾಣ ತಲುಪಿದಾಗ, ಇದು ಬಿಜೆಪಿ ಆಡಳಿತದ ರಾಜ್ಯ ಎಂದು ಹೇಳಲಾಯಿತು. ಆದರೆ, ಇಲ್ಲಿಯೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಮುಂದುವರಿಯುತ್ತಿದ್ದಂತೆ, ಪ್ರತಿಕ್ರಿಯೆ ಸುಧಾರಿಸುತ್ತಿದೆ' ಎಂದು ಅವರು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಾಂಧಿ, 'ಭಾರತದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಧ್ವೇಷವನ್ನು ಹರಡಲಾಗುತ್ತಿದೆ ಮತ್ತು ದೇಶವನ್ನು ವಿಭಜಿಸಲಾಗುತ್ತಿದೆ. ಒಂದು ಜಾತಿಯನ್ನು ಇನ್ನೊಂದರ ವಿರುದ್ಧ, ಒಂದು ಧರ್ಮವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಯಾತ್ರೆ ಅದಕ್ಕೆ ವಿರುದ್ಧವಾಗಿದೆ. ನಾವು ನೋಡುತ್ತಿರುವ ಈ ಯಾತ್ರೆಯ ಇನ್ನೊಂದು ಉದ್ದೇಶವೆಂದರೆ ಈ ಯಾತ್ರೆಯು 'ತಪಸ್ಸು' ನಂತೆ ಕಾಣುತ್ತಿದೆ ಎಂದು ಅವರು ಹೇಳಿದರು.

'ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ. ನಾವು ನಮ್ಮ ಜನರನ್ನು, ರೈತರನ್ನು, ಬಡವರನ್ನು ಪ್ರೀತಿಸುತ್ತೇವೆ ಮತ್ತು ನಾವು ಅವರೊಂದಿಗೆ ನಡೆಯಲು ಬಯಸುತ್ತೇವೆ. ಆದ್ದರಿಂದ, ಈ ದೇಶದ ಜನರು ದೇಶದ ನಿಜವಾದ ಧ್ವನಿಯನ್ನು ಕೇಳಬೇಕು ಎಂಬುದು ಯಾತ್ರೆಯ ಉದ್ದೇಶವಾಗಿದೆ. ದೇಶದಲ್ಲಿ ಆರ್ಥಿಕ ಅಸಮಾನತೆ ಇದ್ದು, ಸಂಪತ್ತು, ಮಾಧ್ಯಮ ಮತ್ತಿತರ ಸಂಸ್ಥೆಗಳನ್ನು ಕೆಲವೇ ಜನ ನಿಯಂತ್ರಿಸುತ್ತಿದ್ದಾರೆ. ಈ ಯಾತ್ರೆಯು ನಿರುದ್ಯೋಗ, ಹಣದುಬ್ಬರದ ವಿರುದ್ಧವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT