ದೇಶ

ಸರ್ಕಾರವು 9,000 ರೈತರಿಗೆ ಒಂದು ದಿನದಲ್ಲಿ ಸಾಲ ನೀಡಲಿದೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Ramyashree GN

ಕೋಟಾ (ರಾಜಸ್ಥಾನ): ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಸರ್ಕಾರವು 9,000 ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂಪಾಯಿಗಳ ಸಾಲದ ಚೆಕ್‌ಗಳನ್ನು ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಭಾನುವಾರ ಕೋಟಾದಲ್ಲಿ ನಡೆದ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಚಿವೆ ಭಾಗವಹಿಸಿದ್ದರು.

'ಸರ್ಕಾರವು ಪಿಎಂ ಸ್ವನಿಧಿ ಯೋಜನೆಯಡಿ 2,363ಕ್ಕೂ ಹೆಚ್ಚು ರೈತರಿಗೆ ಹೆಚ್ಚಿನ ಸಾಲ ಮಂಜೂರು ಮಾಡಿದೆ. ಈ ಪೈಕಿ ಒಂದೇ ದಿನದಲ್ಲಿ 3 ಕೋಟಿ ರೂ. ಗೂ ಅಧಿಕ ಸಾಲ ವಿತರಿಸಿದೆ. ಒಟ್ಟಾರೆಯಾಗಿ, ನಾವು 9,000 ರೈತರಿಗೆ ಸಾಲ ಅಥವಾ ಟ್ರ್ಯಾಕ್ಟರ್ ಖರೀದಿಸಲು ಅಥವಾ ಇತರವುಗಳಿಗಾಗಿ ಸಾಲ ನೀಡುತ್ತೇವೆ' ಎಂದು ಹಣಕಾಸು ಸಚಿವರು ಹೇಳಿದರು.

ಮುದ್ರಾ ಸಾಲ ಯೋಜನೆ ಅಡಿಯಲ್ಲಿ, 3,700ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು 40 ಕೋಟಿ ರೂಪಾಯಿಗಳ ಸಾಲವನ್ನು ಪಡೆಯಲಿದ್ದಾರೆ. ಗ್ರಾಮೀಣ ಭಾಗಕ್ಕೆ ಸ್ಟಾರ್ಟಪ್ ಯೋಜನೆಯಡಿ ನೀಡಲಾಗುತ್ತದೆ. ಸ್ಟಾಂಡಪ್ ಅಡಿಯಲ್ಲಿ ಕೋಟಾದಲ್ಲಿ 20 ಜನರಿಗೆ 2 ಕೋಟಿ ರೂ.ಗಳನ್ನು ಇಂದು (ಭಾನುವಾರ) ಮಂಜೂರು ಮಾಡಲಾಗುವುದು' ಎಂದು ಅವರು ಹೇಳಿದರು.

ವರ್ಷದ ಆರಂಭದಲ್ಲಿ ಪಶುಸಂಗೋಪನೆಗಾಗಿ 10 ಕೋಟಿ ರೂ.ಗಳನ್ನು ವಿತರಿಸಿದ್ದೇವೆ. ಆದರೆ ಇಂದು, ನಾವು ಕೋಟಾದಲ್ಲಿ ಪಶುಸಂಗೋಪನೆಗಾಗಿ 68 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ವಿತರಿಸಲಿದ್ದೇವೆ. ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಅನುಕೂಲವಾಗುವಂತೆ ಅನೇಕ ಬ್ಯಾಂಕ್‌ಗಳು ಮಳಿಗೆಗಳನ್ನು ಹೊಂದಿವೆ ಎಂದು ಸೀತಾರಾಮನ್ ತಮ್ಮ ಭಾಷಣದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ, ರಾಜಸ್ಥಾನದ ಕೋಟಾದಲ್ಲಿ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಐದು ಮೊಬೈಲ್ ಎಟಿಎಂ ವ್ಯಾನ್‌ಗಳಿಗೆ ಚಾಲನೆ ನೀಡಿದರು. ಅದರಲ್ಲಿ ಒಂದು ಕೋಟಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಮತ್ತು ನಾಲ್ಕು ರಾಜಸ್ಥಾನ ಮರುಧರ ಗ್ರಾಮೀಣ ಬ್ಯಾಂಕ್‌ಗೆ ಮಂಜೂರಾಗಿದೆ.

SCROLL FOR NEXT