ದೇಶ

'ನನ್ನ ಪ್ರಪಂಚ ಕೊನೆಗೊಂಡಿದೆ': ರಜೌರಿ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪುತ್ರರನ್ನು ಕಳೆದುಕೊಂಡ ತಾಯಿಯ ರೋದನ!

Vishwanath S

ಶ್ರೀನಗರ: ಅನಾರೋಗ್ಯದಿಂದ ಪತಿಯನ್ನು ಕಳೆದುಕೊಂಡ ನಾಲ್ಕು ವರ್ಷಗಳ ನಂತರ, ಸರೋಜ್ ಬಾಲಾ ಅವರು ಎಂದಿಗೂ ಚೇತರಿಸಿಕೊಳ್ಳದಂತಹ ಹೊಡೆತವನ್ನು ಅನುಭವಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ತಮ್ಮ ಗ್ರಾಮದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಏಳು ಜನರಲ್ಲಿ ಅವರ ಇಬ್ಬರು ಪುತ್ರರೂ ಸೇರಿದ್ದಾರೆ. ಈ ದಾಳಿ ಅವರೆಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ. 

ಸೂರಜ್ ಬಾಲಾ ಅವರ 21 ವರ್ಷದ ಮಗ ಪ್ರಿನ್ಸ್ ಶರ್ಮಾ ಭಾನುವಾರ ಜೀವನ್ಮರಣದ ಹೋರಾಟದಲ್ಲಿ ಸೋತಿದ್ದಾರೆ. ಜನವರಿ 1ರಂದು ಧಂಗ್ರಿ ಗ್ರಾಮದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಗುಂಡು ತಗುಲಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೊಸ ವರ್ಷದ ದಿನದಂದು ಭಯೋತ್ಪಾದಕರು ಮನೆಯ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಪ್ರಿನ್ಸ್ ಶರ್ಮಾನ ಹಿರಿಯ ಸಹೋದರ ದೀಪಕ್ ಸಾವನ್ನಪ್ಪಿದ್ದರು. ಭಾನುವಾರದಂದು ಎರಡನೇ ಮಗನ ಸಾವಿನ ಸುದ್ದಿ ಇದೀಗ ತಾಯಿ ಸರೋಜ್ ಬಾಲಾ ಅವರ ಪ್ರಪಂಚ ಕೊನೆಗೊಳ್ಳುವಂತೆ ಮಾಡಿದೆ.

ಧಂಗ್ರಿಯಲ್ಲಿನ ಸ್ಮಶಾನದಲ್ಲಿ ಕಿರಿಯ ಮಗನ ಅಂತಿಮ ಸಂಸ್ಕಾರದ ನಂತರ ಸರೋಜ್ ಬಾಲಾ ಕಣ್ಣೀರು ಹಾಕಿದ್ದಾರೆ. 'ಈಗ ನಾನು ಒಬ್ಬಂಟಿಯಾಗಿದ್ದೇನೆ. ಈಗ ನಾನು ಯಾರೊಂದಿಗೆ ಮಾತನಾಡಲಿ, ನನ್ನ ಪ್ರಪಂಚವು ಅಂತ್ಯಗೊಂಡಿದ್ದು ಜೀವನದಲ್ಲಿ ಎಲ್ಲವೂ ಮುಗಿದಿದೆ ಎಂದು ಕಣ್ಣೀರು ಹಾಕಿದರು. ಭಯೋತ್ಪಾದಕರು ಜನವರಿ 1ರ ತಡರಾತ್ರಿ ಧಂಗ್ರಿ ಗ್ರಾಮದಲ್ಲಿ ಮೂರು ಮನೆಗಳನ್ನು ಗುರಿಯಾಗಿಸಿಕೊಂಡು ನಂತರ ಪರಾರಿಯಾಗಿದ್ದಾರೆ.

ಶರ್ಮಾ ಕುಟುಂಬದ ಮನೆಯ ಹೊರಗೆ ಮರುದಿನ ಸ್ಫೋಟಗೊಂಡ ಐಇಡಿಯಲ್ಲಿ ಅದೇ ಕುಟುಂಬದ  4 ವರ್ಷದ ವಿಹಾನ್ ಶರ್ಮಾ ಮತ್ತು 16 ವರ್ಷದ ಸಮಿಷ್ಕಾ ಶರ್ಮಾ ಸಾವನ್ನಪ್ಪಿದ್ದಾರೆ. ಮೊದಲ ದಿನವೇ ದೀಪಕ್ ಮತ್ತು ಇತರ ಮೂವರು ಸಾವನ್ನಪ್ಪಿದ್ದರೆ, ಮರುದಿನ ಐಇಡಿ ಸ್ಫೋಟದಿಂದ ಅದೇ ಕುಟುಂಬದಈ ಘಟನೆಯಲ್ಲಿ ಪ್ರಿನ್ಸ್ ಸೇರಿದಂತೆ 16 ಮಂದಿ ಗಾಯಗೊಂಡಿದ್ದರು.

ಭಾರತೀಯ ಸೇನೆಯ ಆರ್ಡಿನೆನ್ಸ್ ವಿಭಾಗದಲ್ಲಿ ಕೆಲಸಕ್ಕೆ ಆಯ್ಕೆಯಾದ ದೀಪಕ್ ಅವರ ಅಂತ್ಯಕ್ರಿಯೆಯನ್ನು ಕಳೆದ ವಾರ ಮಂಗಳವಾರ ಮಾಡಲಾಯಿತು. ಅದೇ ದಿನ ದೀಪಕ್ ತನ್ನ ಕೆಲಸಕ್ಕೆ ಸೇರಲು ಲೇಹ್‌ಗೆ ಹೊರಡಬೇಕಿತ್ತು. ಮತ್ತೊಂದೆಡೆ, ಪ್ರಿನ್ಸ್ ಜಲಶಕ್ತಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ತಂದೆ ತೀರಿಕೊಂಡ ನಂತರ ಈ ಕೆಲಸ ಸಿಕ್ಕಿತ್ತು. ಸರೋಜ ಬಾಲಾ ಅವರು, "ನನ್ನ ಇಬ್ಬರೂ ಮಕ್ಕಳು ನನ್ನೊಂದಿಗೆ ದಿನನಿತ್ಯ ಕುಳಿತುಕೊಳ್ಳುತ್ತಿದ್ದರು. ಕುಟುಂಬದ ವಿಷಯಗಳ ಬಗ್ಗೆ ನಾವು ಸುದೀರ್ಘ ಚರ್ಚೆ ನಡೆಸುತ್ತೇವೆ. ನನ್ನ ಜೀವಕ್ಕೆ ಈಗ ಬೆಲೆ ಇಲ್ಲ, ಮಕ್ಕಳ ಸಾವಿನೊಂದಿಗೆ ಎಲ್ಲವೂ ಕಳೆದುಹೋಯಿತು ಎಂದರು.

SCROLL FOR NEXT