ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ 
ದೇಶ

ತಮಿಳುನಾಡು: ರಾಜ್ಯಪಾಲರ ಭಾಷಣಕ್ಕೆ ಸ್ಟಾಲಿನ್ ಆಕ್ಷೇಪ, ಸದನದಿಂದ ಹೊರ ನಡೆದ ಗವರ್ನರ್ ಆರ್ ಎನ್ ರವಿ!

ತಮಿಳುನಾಡು ವಿಧಾನಸಭಾ ಅಧಿವೇಶನದ  ಮೊದಲ ದಿನವಾದ ಇಂದು ರಾಜ್ಯಪಾಲ ಆರ್ ಎನ್ ರವಿ ಭಾಷಣದ ನಂತರ  ಗದ್ದಲ, ಕೋಲಾಹಲ ಉಂಟಾಯಿತು.

ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನದ  ಮೊದಲ ದಿನವಾದ ಇಂದು ರಾಜ್ಯಪಾಲ ಆರ್ ಎನ್ ರವಿ ಭಾಷಣದ ನಂತರ  ಗದ್ದಲ, ಕೋಲಾಹಲ ಉಂಟಾಯಿತು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಕಡತಕ್ಕೆ ತೆಗೆದುಕೊಳ್ಳಬೇಕು, ರಾಜ್ಯಪಾಲರು ಸೇರಿಸಿರುವ ಉಳಿದ ಭಾಷಣವನ್ನು ತೆಗೆದುಹಾಕಬೇಕೆಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸ್ಪೀಕರ್ ಗೆ ಹೇಳಿದ ನಂತರ ಗವರ್ನರ್ ಆರ್ ಎನ್ ರವಿ ಸದನದಿಂದ ಹೊರ ನಡೆದರು.

ರಾಜ್ಯ ಸರ್ಕಾರ ಸಿದ್ದಪಡಿಸಿದ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ಕಡತಕ್ಕೆ ಸೇರಿಸುವಂತೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ರಾಜ್ಯಪಾಲರ ಭಾಷಣಕ್ಕೆ ಎಂಕೆ ಸ್ಟಾಲಿನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗವರ್ನರ್ ಸದನದಿಂದ ನಿರ್ಗಮಿಸಿದರು. 

ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಜಾತ್ಯತೀತತೆ, ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ. ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ, ರಾಜ್ಯಪಾಲರು ಅವರ ಹೆಸರನ್ನು ತಮ್ಮ ಭಾಷಣದಲ್ಲಿ ಹೇಳಿರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಿರ್ಣಯ ಮಂಡಿಸಿದರು. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನಿರ್ಣಯದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. 

ಈ ಮಧ್ಯೆ, ತಮಿಳುನಾಡು ಹೆಸರು ಸರಿಯಾಗಿಲ್ಲ ಎಂಬ ರಾಜ್ಯಪಾಲರ ಹೇಳಿಕೆ ಬಗ್ಗೆಯೂ ಕಿಡಿಕಾರಿದ ಡಿಎಂಕೆ ಶಾಸಕರು, ಬಿಜೆಪಿ, ಆರ್ ಎಸ್ ಎಸ್ ಸಿದ್ದಾಂತಗಳನ್ನು ಹೇರಬೇಡಿ. ಇದು ನಾಗಲ್ಯಾಂಡ್ ಇಲ್ಲ, ಹೆಮ್ಮೆಯ ತಮಿಳುನಾಡು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ರಷ್ಯಾ ಗೌಪ್ಯ ಮಾಹಿತಿ ಹಂಚಿಕೆ: ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ನಮ್ಮದು, ಭಯವಿಲ್ಲ ಎಂದ ಅಮೆರಿಕಾ

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

ಬಿಹಾರದ ನೂತನ ಸಾರಥಿ ಯಾರು: ದಲಿತ ನಾಯಕನಿಗೆ ಸಿಎಂ ಪಟ್ಟವೋ? ಅಮಿತ್ ಶಾ ಭಂಟನಿಗೆ ಸಿಂಹಾಸನವೋ!

Karnataka Budget 2026-ಬೆಂಗಳೂರು ನಂತರ ರಾಜ್ಯದ ಎರಡನೇ ಐಟಿ ನಗರವಾಗಿ ಮೈಸೂರು ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

SCROLL FOR NEXT