ದೇಶ

ರಜೌರಿ ಉಗ್ರರ ದಾಳಿ: 50 ಜನರ ಬಂಧನ, ತೀವ್ರ ವಿಚಾರಣೆ 

Nagaraja AB

ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ದಾಂಗ್ರಿ ಹಳ್ಳಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದ ದಾಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಸುಮಾರು 50 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜನವರಿ 1 ರಂದು ನಡೆದ ಉಗ್ರರ ದಾಳಿಯಲ್ಲಿ ಏಳು ಮಂದಿ ಮೃತಪಟ್ಟು,  14 ಮಂದಿ ಗಾಯಗೊಂಡಿದ್ದರು.

ಈ ದಾಳಿ ನಡೆದ ಸ್ಥಳೀಯ ಸ್ವಯಂ ಸೇವಕರನ್ನೊಳಗೊಂಡ ಹಳ್ಳಿಯ ರಕ್ಷಣಾ ಗಾರ್ಡ್ ನ್ನು ಆಡಳಿತ ಬಲಗೊಳಿಸಿತ್ತು. ಸಂಭಾವ್ಯ  ಒಳನುಸುಳುವಿಕೆ ಮಾರ್ಗಗಳ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಬರುವ ಉಗ್ರರ ಬಗ್ಗೆ ಸುಳಿವು ನೀಡುವವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

ದಾಳಿಗೂ ಮುನ್ನ ಉಗ್ರರು ಕಾಣಿಸಿಕೊಂಡ ವರದಿಯಾಗಿದ್ದ ಎರಡು ಡಜನ್ ಗೂ ಹೆಚ್ಚು ಹಳ್ಳಿಗಳಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್ ಪಿಎಫ್ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆಯಾ ಕಟ್ಟಿನ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಾಳಿಗೂ ಮುನ್ನ ಉಗ್ರರು ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದ್ದು, ಶಂಕಿತ ವ್ಯಕ್ತಿಗಳ ವಿಚಾರಣೆ ವೇಳೆ ಅನೇಕರ ಪಾತ್ರ ಬೆಳಕಿಗೆ ಬಂದಿದೆ ಎಂದು ರಜೌರಿ ಹಿರಿಯ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಸ್ಲಾಂ ಮಾಹಿತಿ ನೀಡಿದ್ದಾರೆ. 
 

SCROLL FOR NEXT