ದೇಶ

ಹಾವು ಕೊಂದ ವ್ಯಕ್ತಿ ವಿರುದ್ಧ ಅರಣ್ಯ ಇಲಾಖೆ ದೂರು; ಪ್ರಕರಣ ದಾಖಲಿಸಿದ ಪೊಲೀಸರು

Ramyashree GN

ಬಾಗಪತ್: ಇಲ್ಲಿನ ಗ್ರಾಮವೊಂದರಲ್ಲಿ ಹಾವನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇಲ್ಲಿನ ಛಪ್ರೌಲಿ ಪ್ರದೇಶದ ಶಬ್ಗಾ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಆರೋಪಿ ಸ್ವಾಲಿನ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು, ಸೋಮವಾರ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿದೆ.

ಹಾವನ್ನು ಕೊಂದ ಆರೋಪದ ಮೇಲೆ ಸ್ವಾಲಿನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸೇಠ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಅರಣ್ಯ ಸಿಬ್ಬಂದಿ ಸಂಜಯ್‌ಕುಮಾರ್‌ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.
ಮೇಲ್ನೋಟಕ್ಕೆ, ಹಾವು ಭಾರವಾದ ವಸ್ತುವಿನ ಅಡಿಯಲ್ಲಿ ಸಿಕ್ಕಿ ಸಾವಿಗೀಡಾಗಿದೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಸೇಠ್ ಹೇಳಿದ್ದಾರೆ.

ಗ್ರಾಮದ ರಾಮ್ ಶರಣ್ ಎಂಬುವವರ ಮನೆಯಿಂದ ಹಾವು ಹೊರಬಂದ ನಂತರ ಜನಸಾಗರವೇ ಜಮಾಯಿಸಿತ್ತು. ಗ್ರಾಮಸ್ಥರ ಮಾತಿನಂತೆ ಸ್ವಾಲಿನ್ ಅಲ್ಲಿಗೆ ಬಂದು ಹಾವನ್ನು ಕೊಂದಿದ್ದಾರೆ.

SCROLL FOR NEXT