ಉತ್ತರಾಖಂಡದ ಜೋಶಿಮಠದ ಬಳಿಕ ಆಲಿಗಢದ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕು 
ದೇಶ

ಉತ್ತರಾಖಂಡದ ಜೋಶಿಮಠದ ಬಳಿಕ ಉತ್ತರ ಪ್ರದೇಶದ ಅಲಿಗಢದ ಮನೆಗಳಲ್ಲಿ ಬಿರುಕು, ನಿವಾಸಿಗಳಲ್ಲಿ ಆತಂಕ

ಉತ್ತರಾಖಂಡದ ಜೋಶಿಮಠದ ಬಳಿಕ ಇದೀಗ ಉತ್ತರ ಪ್ರದೇಶದ ಅಲಿಗಢದಲ್ಲಿ ಹಲವಾರು ಮನೆಗಳು ಬಿರುಕು ಬಿಟ್ಟಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಆಲಿಗಢ: ಉತ್ತರಾಖಂಡದ ಜೋಶಿಮಠದ ಬಳಿಕ ಇದೀಗ ಉತ್ತರ ಪ್ರದೇಶದ ಅಲಿಗಢದಲ್ಲಿ ಹಲವಾರು ಮನೆಗಳು ಬಿರುಕು ಬಿಟ್ಟಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಆಲಿಗಢ ಮುನ್ಸಿಪಲ್ ಕಾರ್ಪೊರೇಶನ್‌ನ ಹೆಚ್ಚುವರಿ ಆಯುಕ್ತ ರಾಕೇಶ್ ಕುಮಾರ್ ಯಾದವ್ ಮಾತನಾಡಿ, 'ನಾವು ನಮ್ಮ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತೇವೆ ಮತ್ತು ಇದು ಏಕೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುವುದು' ಎಂದು ಹೇಳಿದರು.

ಸ್ಥಳೀಯರ ಪ್ರಕಾರ, ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಪೈಪ್‌ಲೈನ್ ಹಾಕಲಾಗಿದ್ದು, ಈಗ ಅದು ಸೋರಿಕೆಯಾಗುತ್ತಿದೆ. ಇದು ಮನೆಗಳಲ್ಲಿ ಬಿರುಕುಗಳ ಕಾಣಿಸಿಕೊಳ್ಳಲು ಕಾರಣವಾಗಿದೆ  ಎಂದು ವರದಿಯಾಗಿದೆ.

ಕನ್ವರಿಗಂಜ್ ಪ್ರದೇಶದಲ್ಲಿನ ಮನೆಗಳಲ್ಲಿ ಬಿರುಕುಗಳು ಮತ್ತು ಸೋರಿಕೆಯಾಗುತ್ತಿರುವುದು ವರದಿಯಾಗಿದೆ.
3-4 ದಿನಗಳು ಕಳೆದಿವೆ. ಈ ಬಗ್ಗೆ ಇಲಾಖೆಗೆ ತಿಳಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮನ್ನು ಭಯಭೀತರಾಗಿ ಬದುಕುವಂತೆ ಮಾಡಲಾಗುತ್ತಿದೆ' ಎಂದು ಸ್ಥಳೀಯ ನಿವಾಸಿ ಮನ್ಸೂರ್ ಅಲಿ ತಿಳಿಸಿದ್ದಾರೆ.

ಜೋಶಿಮಠವು ದೊಡ್ಡ ಪ್ರದೇಶದಲ್ಲಿ ಕುಸಿತ ಕಂಡಿದ್ದರಿಂದ ಈ ತಿಂಗಳ ಆರಂಭದಲ್ಲಿ ನೂರಾರು ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭಿಸಿದರು ಎಂಬುದನ್ನು ಸ್ಮರಿಸಬಹುದು. ಹಲವಾರು ಕುಟುಂಬಗಳನ್ನು ಈಗಾಗಲೇ ಅಲ್ಲಿಂದ ಸ್ಥಳಾಂತರಿಸಲಾಗಿದೆ. ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಅಥವಾ ಬಾಡಿಗೆ ಮನೆಗಳಿಗೆ ತೆರಳುವಂತೆ ಹಲವು ಕುಟುಂಬಗಳಿಗೆ ಸೂಚಿಸಲಾಗಿದೆ.

ಈ ಪ್ರದೇಶದಲ್ಲಿ 86 ಮನೆಗಳನ್ನು ಅಸುರಕ್ಷಿತ ವಲಯ ಎಂದು ಗುರುತಿಸಲಾಗಿದೆ. ಜೋಶಿಮಠದ ಜಿಲ್ಲಾಡಳಿತವು ಮುಳುಗುತ್ತಿರುವ ಪಟ್ಟಣದಲ್ಲಿ ವಾಸಿಸಲು ಅಸುರಕ್ಷಿತವಾಗಿರುವ ಮನೆಗಳ ಮೇಲೆ ರೆಡ್ ಕ್ರಾಸ್ ಗುರುತುಗಳನ್ನು ಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ