ಸಾಂದರ್ಭಿಕ ಚಿತ್ರ 
ದೇಶ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ ಗುರುವಾರ ಬೆಳಗ್ಗೆ ಪುರ್ಬಾ ಬರ್ಧಮಾನ್ ಜಿಲ್ಲೆಯ ಕೇತುಗ್ರಾಮದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ...

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ ಗುರುವಾರ ಬೆಳಗ್ಗೆ ಪುರ್ಬಾ ಬರ್ಧಮಾನ್ ಜಿಲ್ಲೆಯ ಕೇತುಗ್ರಾಮದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಆ ಪ್ರದೇಶದಲ್ಲಿ ಸಕ್ರಿಯ ಟಿಎಂಸಿ ಕಾರ್ಯಕರ್ತನಾಗಿದ್ದ ದುಲಾಲ್ ಶೇಖ್ ಅವರು ಅಮ್ಗಾರಿಯಾ ಬಜಾರ್‌ನ ಸ್ಟಾಲ್‌ನಲ್ಲಿ ಚಹಾ ಕುಡಿಯುತ್ತಿದ್ದಾಗ ಪಾಯಿಂಟ್-ಬ್ಲಾಂಕ್ ರೇಂಜ್‌ ನಿಂದ ಶೂಟ್ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣವೇ ಶೇಖ್(50) ಅವರನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಅವರು ಹೇಳಿದ್ದಾರೆ.

"ಈ ಪ್ರದೇಶದಲ್ಲಿ ಟಿಎಂಸಿಯ ಪ್ರತಿಸ್ಪರ್ಧಿ ಬಣಕ್ಕೆ ಸೇರಿದ ಕೆಲವರು ನನ್ನ ತಂದೆಗೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಅವರು ಮರಳು ಮತ್ತು ಕಟ್ಟಡ ಸಾಮಗ್ರಿಗಳ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ಶೇಖ್ ಅವರ ಮಗ ಆರೋಪಿಸಿದ್ದಾರೆ.

ಟಿಎಂಸಿ ರಾಜ್ಯ ಉಪಾಧ್ಯಕ್ಷ ಜಾಯ್ ಪ್ರಕಾಶ್ ಮಜುಂದಾರ್ ಮಾತನಾಡಿ, ‘‘ಪಂಚಾಯತ್ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಸಿಪಿಐ(ಎಂ) ವಿವಿಧ ಕ್ಷೇತ್ರಗಳಲ್ಲಿ ಪ್ರಭಾವಿ ಟಿಎಂಸಿ ಸದಸ್ಯರನ್ನು ತೊಲಗಿಸಲು ಸಂಚು ರೂಪಿಸುತ್ತಿವೆ. ಶೇಖ್ ಅವರು ಇಂತಹ ಕೃತ್ಯಕ್ಕೆ ಬಲಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖೈಬರ್ ಪಖ್ತುಂಖ್ವಾದಲ್ಲಿ "ಶಾಂತಿ ರ‍್ಯಾಲಿ"ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು

ರಸ್ತೆಗೆ ತಂದು ರಾಮಲಲ್ಲಾನಿಗೆ ಅಪಮಾನ: ಸಂಸದ ಪಪ್ಪು ಯಾದವ್ ಹತ್ಯೆಗೆ ಯತ್ನ ಆರೋಪ, Video!

ದೆಹಲಿ: ವೀಸಾ ನಿಯಮಗಳನ್ನು ಉಲ್ಲಂಘನೆ; 6 ​​ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಹಿಂದೂರಾಷ್ಟ್ರವಾಗಿ ನೇಪಾಳ ಘೋಷಣೆಗೆ ಆಗ್ರಹ: ಪ್ರತಿಭಟನಾ ನಿರತ ಹಿಂದೂ ಸಾಮ್ರಾಟ್ ಸೇನಾ ಜೊತೆ ಸರ್ಕಾರದ ಮಾತುಕತೆ; 19 ಅಂಶಗಳ ಒಪ್ಪಂದ

ಇದು ಅತ್ಯಗತ್ಯ: ಭಾರತದಲ್ಲಿ UCC ಅನುಷ್ಠಾನಕ್ಕೆ ತಸ್ಲೀಮಾ ನಸ್ರೀನ್ ಬೆಂಬಲ