ದೇಶ

ಕಲ್ಲಿದ್ದಲು ತೆರಿಗೆ ಹಗರಣ: ಬೆಂಗಳೂರು, ಛತ್ತೀಸ್‌ಗಢ, ಜಾರ್ಖಂಡ್ ನಲ್ಲಿ ಇಡಿ ದಾಳಿ

Lingaraj Badiger

ನವದೆಹಲಿ: ರಾಜ್ಯಗಳಲ್ಲಿ ನಡೆದಿರುವ ಕಲ್ಲಿದ್ದಲು ತೆರಿಗೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಶುಕ್ರವಾರ ಬೆಂಗಳೂರು, ಛತ್ತೀಸ್‌ಗಢ ಮತ್ತು ಜಾರ್ಖಂಡ್ ನ ಹಲವು ಸ್ಥಳಗಲ್ಲಿ ಶುಕ್ರವಾರ ದಾಳಿ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ನ ಹಲವು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯ್‌ಪುರ, ಕೋರ್ಬಾ, ದುರ್ಗ್ ಮತ್ತು ಜಾರ್ಖಂಡ್‌ನ ರಾಂಚಿ ಹಾಗೂ ಬೆಂಗಳೂರು(ಕರ್ನಾಟಕ)ನಲ್ಲಿ ಇಡಿ ಅಧಇಕಾರಿಗಳು ಶೋಧ ನಡೆಸುತ್ತಿದ್ದಾರೆ.

ಐಎಎಸ್ ಅಧಿಕಾರಿ ಮತ್ತು ಛತ್ತೀಸ್‌ಗಢ ಸರ್ಕಾರದ ಕಾರ್ಯದರ್ಶಿ ಅನ್ಬಳಗನ್ ಪಿ ಅವರ ಕಚೇರಿಯನ್ನು ಸಹ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯಿ ಮತ್ತು ಕೆಲವು ಉದ್ಯಮಿಗಳ ಮೇಲೆ ದಾಳಿ ನಡೆಸಲಾಗಿತ್ತು.

ಛತ್ತೀಸಗಢದಲ್ಲಿ ಪ್ರತಿ ಟನ್ ಕಲ್ಲಿದ್ದಲು ಸಾಗಣೆಗೆ ಅಕ್ರಮವಾಗಿ 25 ರೂಪಾಯಿ ವಸೂಲಿ ಮಾಡಲಾಗಿದ್ದು, ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು, ಮಧ್ಯವರ್ತಿಗಳು ಈ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂದು ಇಡಿ ಆರೋಪಿಸಿದೆ.

SCROLL FOR NEXT