ಆರೋಪಿ ಶಂಕರ್ ಮಿಶ್ರಾ 
ದೇಶ

ವಿಮಾನದಲ್ಲಿ 'ಮೂತ್ರ ವಿಸರ್ಜನೆ' ಘಟನೆ: ಶಂಕರ್ ಮಿಶ್ರಾ ಹೇಳಿಕೆ ಅವಹೇಳನಕಾರಿ ಎಂದ ದೂರುದಾರ ಮಹಿಳೆ!

ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ ನಿನ್ನೆ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯನ್ನು ನಿರಾಕರಿಸಿರುವ ದೂರುದಾರು ಮಹಿಳೆ, ತಾನೇ ಮೂತ್ರ ವಿಸರ್ಜನೆ ಮಾಡಿರುವ ಸಾಧ್ಯತೆಯಿರುವುದಾಗಿ ಹೇಳಿರುವುದು ಸಂಪೂರ್ಣ ಸುಳ್ಳು ಮತ್ತು ಹುಸಿಯಾಗಿದ್ದು, ಸಹಜವಾಗಿ ಅವಹೇಳನಕಾರಿಯಾಗಿದೆ ಎಂದು ಆರೋಪಿಸಿದ್ದಾರೆ. 

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ ನಿನ್ನೆ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯನ್ನು ನಿರಾಕರಿಸಿರುವ ದೂರುದಾರು ಮಹಿಳೆ, ತಾನೇ ಮೂತ್ರ ವಿಸರ್ಜನೆ ಮಾಡಿರುವ ಸಾಧ್ಯತೆಯಿರುವುದಾಗಿ ಹೇಳಿರುವುದು ಸಂಪೂರ್ಣ ಸುಳ್ಳು ಮತ್ತು ಹುಸಿಯಾಗಿದ್ದು, ಸಹಜವಾಗಿ ಅವಹೇಳನಕಾರಿಯಾಗಿದೆ ಎಂದು ಆರೋಪಿಸಿದ್ದಾರೆ. 

ಕಸ್ಟಡಿ ವಿಚಾರಣೆ ನಿರಾಕರಿಸಿ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯ ನೀಡಿದ ಆದೇಶ ಪರಿಷ್ಕರಿಸಲು ಕೋರಲಾಗಿದ್ದ ಪೊಲೀಸ್ ಅರ್ಜಿಯ ವಿರುದ್ಧ ಶುಕ್ರವಾರ ವಾದ ಮಂಡಿಸಿದ ಮಿಶ್ರಾ ಪರ ವಕೀಲರು, ತಮ್ಮ ಕಕ್ಷಿದಾರ ಅಪರಾಧ ಮಾಡಿಲ್ಲ, ದೂರುದಾರ ಮಹಿಳೆಯೇ ಮೂತ್ರ ವಿಸರ್ಜನೆ ಮಾಡಿರುವುದಾಗಿ ಹೇಳಿದ್ದರು. 

ಆರೋಪಿ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಹುಸಿಯಾಗಿದ್ದು, ಸ್ವಭಾವತ:ವಾಗಿ ಅವಹೇಳನಕಾರಿಯಾಗಿದೆ. ಹೇಳಲಾದ ಆರೋಪಗಳು ಸಂಪೂರ್ಣ ವಿರೋಧಾಭಾಸದಿಂದ ಕೂಡಿವೆ ಎಂದು ದೂರುದಾರ ಮಹಿಳೆ ಪರ ವಕೀಲ ಅಂಕೂರ್ ಮಹೀಂದ್ರೋ ಹೇಳಿದ್ದಾರೆ.

 ಆರೋಪಿ ತಾನು ಮಾಡಿರುವ ಅಸಹ್ಯಕರ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡುವ ಬದಲು, ದೂರುದಾರ ಮಹಿಳೆಗೆ ಮತ್ತಷ್ಟು ಕಿರುಕುಳ ನೀಡುವ ಉದ್ದೇಶದಿಂದ ತಪ್ಪು ಮಾಹಿತಿ ಮತ್ತು ಸುಳ್ಳುಗಳನ್ನು ಹೇಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಹಲವಾರು ಕಥಕ್ ನೃತ್ಯಗಾರರು ಬಳಲುತ್ತಿರುವಂತೆ ಪ್ರಾಸ್ಟೇಟ್ ಗೆ ಸಂಬಂಧಿಸಿದ ಕೆಲವು ಕಾಯಿಲೆಗಳಿಂದ ದೂರುದಾರ ಮಹಿಳೆ ಬಳಲುತ್ತಿದ್ದಾರೆ ಎಂದು ಮಿಶ್ರಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT