ಲಾಕೆಟ್ ಚಟರ್ಜಿ 
ದೇಶ

ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿದರೆ ಮರಕ್ಕೆ ಕಟ್ಟಿ ಹಾಕಿ ಪ್ರತಿದಾಳಿ ಮಾಡಿ: ಬಿಜೆಪಿ ಸಂಸದೆ

ಟಿಎಂಸಿ ಕಾರ್ಯಕರ್ತರ ದಾಳಿಗೆ ಪ್ರತೀಕಾರ ತೀರಿಸುವಂತೆ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಜನರಿಗೆ ಹೇಳಿದ್ದು ಈ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ತೀವ್ರ ವಿವಾದ ಸೃಷ್ಟಿಸಿದೆ.

ಕೋಲ್ಕತ್ತಾ: ಟಿಎಂಸಿ ಕಾರ್ಯಕರ್ತರ ದಾಳಿಗೆ ಪ್ರತೀಕಾರ ತೀರಿಸುವಂತೆ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಜನರಿಗೆ ಹೇಳಿದ್ದು ಈ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. 

'ರಾಜ್ಯದಲ್ಲಿ ಪಂಚಾಯ್ತಿ ಚುನಾವಣೆಗೆ ಮುನ್ನ ಆಡಳಿತ ಪಕ್ಷ ಆರಂಭಿಸಿರುವ ಜನಸಂಪರ್ಕ ಅಭಿಯಾನದ ವೇಳೆ ಕಷ್ಟವನ್ನು ಹೇಳಿಕೊಳ್ಳಲು ಬಂದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರಿದ ಈ ಹಿನ್ನೆಲೆಯಲ್ಲಿ ಜನರಿಗೆ ಪ್ರತಿದಾಳಿ ನಡೆಸುವಂತೆ ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ದತ್ತಪುಕುರ್ ಪ್ರದೇಶದಲ್ಲಿ ಶನಿವಾರ ನಡೆದ ತೃಣಮೂಲ ಕಾಂಗ್ರೆಸ್‌ನ 'ದೀದಿ ಕಾ ಸುರಕ್ಷಾ ಕವಚ' ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಸಂದರ್ಭದಲ್ಲಿ ಹೂಗ್ಲಿ ಸಂಸದರು ಈ ಹೇಳಿಕೆ ನೀಡಿದ್ದಾರೆ. 'ಒಬ್ಬ ಟಿಎಂಸಿ ಕಾರ್ಯಕರ್ತ ನಿಮಗೆ (ಆಮ್ ಆದ್ಮಿ) ಕಪಾಳಮೋಕ್ಷ ಮಾಡಿದರೆ, ಅವನು ನಿಮ್ಮ ಕುಂದುಕೊರತೆಗಳನ್ನು ಕೇಳಲು ಬಯಸದಿದ್ದರೆ, ಅವನನ್ನು ಮರಕ್ಕೆ ಕಟ್ಟಿ ನಾಲ್ಕೈದು ಬಾರಿ ಹೊಡೆಯಿರಿ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗೂ ಮೊದಲು, ಟಿಎಂಸಿ ಜನಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಹೆಸರನ್ನು 'ದೀದಿ ಕಾ ಸುರಕ್ಷಾ ಕವಚ' ಎಂದು ಇಡಲಾಗಿದೆ. ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಸದುಪಯೋಗವನ್ನು ಎಲ್ಲ ಜನರು ಪಡೆಯಬೇಕು ಎಂಬುದು ಅಭಿಯಾನದ ಉದ್ದೇಶವಾಗಿದೆ. ಮೊದಲ ಹಂತದ ಪ್ರಚಾರ ಬುಧವಾರದಿಂದ ಆರಂಭಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖೈಬರ್ ಪಖ್ತುಂಖ್ವಾದಲ್ಲಿ "ಶಾಂತಿ ರ‍್ಯಾಲಿ"ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು

ರಸ್ತೆಗೆ ತಂದು ರಾಮಲಲ್ಲಾನಿಗೆ ಅಪಮಾನ: ಸಂಸದ ಪಪ್ಪು ಯಾದವ್ ಹತ್ಯೆಗೆ ಯತ್ನ ಆರೋಪ, Video!

ದೆಹಲಿ: ವೀಸಾ ನಿಯಮಗಳನ್ನು ಉಲ್ಲಂಘನೆ; 6 ​​ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಹಿಂದೂರಾಷ್ಟ್ರವಾಗಿ ನೇಪಾಳ ಘೋಷಣೆಗೆ ಆಗ್ರಹ: ಪ್ರತಿಭಟನಾ ನಿರತ ಹಿಂದೂ ಸಾಮ್ರಾಟ್ ಸೇನಾ ಜೊತೆ ಸರ್ಕಾರದ ಮಾತುಕತೆ; 19 ಅಂಶಗಳ ಒಪ್ಪಂದ

ಇದು ಅತ್ಯಗತ್ಯ: ಭಾರತದಲ್ಲಿ UCC ಅನುಷ್ಠಾನಕ್ಕೆ ತಸ್ಲೀಮಾ ನಸ್ರೀನ್ ಬೆಂಬಲ