ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ

ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. 

ಜಮ್ಮು: ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. 

ಹತ್ಯೆಗೀಡಾದ ಉಗ್ರರನ್ನು ಅರ್ಬಾಸ್ ಮಿರ್ ಮತ್ತು ಶಾಹಿದ್ ಶೇಖ್ ಎಂದು ಗುರುತಿಸಲಾಗಿದ್ದು ಇವರು ಪುಲ್ವಾಮದವರಾಗಿದ್ದು ಭಯೋತ್ಪಾದಕ ಸಂಘಟನೆ ಎಲ್ ಇಟಿ ಜೊತೆ ಸಂಪರ್ಕ ಹೊಂದಿದವರಾಗಿದ್ದಾರೆ. 

ಇತ್ತೀಚೆಗೆ ಎನ್ ಕೌಂಟರ್ ನಲ್ಲಿ ಇಬ್ಬರೂ ತಪ್ಪಿಸಿಕೊಂಡಿದ್ದರು. ಇಂದು ಬುದ್ಗಾಮದಲ್ಲಿ ಸೇನೆಯ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಶಂಕಿತ ವಾಹನವನ್ನು ನಿಲ್ಲಿಸಿದರು. ಬಳಿಕ ಗುಂಡಿನ ಚಕಮಕಿ ನಡೆಯಿತು. ಈ ಬಾರಿ ತಪ್ಪಿಸಿಕೊಳ್ಳಲಾಗದೆ ಹತರಾಗಿದ್ದಾರೆ. ಸೇನಾಪಡೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

ಈ ಬಾರಿಯ 'ಯುವ ದಸರಾ' ಉದ್ಘಾಟನೆಗೆ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಗೆ ಆಹ್ವಾನ!

India without Politics: ‘ಹನುಮಾನ್ ಅಂಶ್’ ನೋಡಲು ಚಪ್ಪಲಿ ಬಿಚ್ಚಿ ಕುಳಿತ ಮುಸ್ಲಿಂ ವ್ಯಕ್ತಿ; video ವೈರಲ್

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

'ಭಾರತ ಕೂಡ ಸೋತಿದೆ' ಎಂದ PCB, ಮೊಹ್ಸಿನ್ ನಕ್ವಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ Iceland Cricket Board