ದೇಶ

ಆಂತರಿಕ ಕಲಹವಿರುವ ಪಕ್ಷದಲ್ಲಿ ಹೇಗೆ ತಾನೆ ಕೆಲಸ ಮಾಡಲು ಸಾಧ್ಯ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕ

Srinivas Rao BV

ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕ ಮನ್ಪ್ರೀತ್ ಸಿಂಗ್ ಬಾದಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ತಾವು ಕಾಂಗ್ರೆಸ್ ತೊರೆದಿರುವುದಕ್ಕೆ ಕಾರಣ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಮನ್ಪ್ರೀತ್ ಸಿಂಗ್ ಬಾದಲ್,  ಅಂತಃಕಲಹವಿರುವ ಪಕ್ಷದಲ್ಲಿ ಹೇಗೆ ತಾನೇ ಕೆಲಸ ಮಾಡಲು ಸಾಧ್ಯ? ಆ ಪಕ್ಷದಲ್ಲಿ ಕೂಟಗಳಿವೆ, ಒಬ್ಬರನ್ನು ಎಲ್ಒಪಿ ಮಾಡಿದ್ದಾರೆ, ಮತ್ತೊಬ್ಬರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಈ ಕೂಟಗಳು ತಮ್ಮ ತಮ್ಮಲ್ಲೇ ಜಗಳ ಕಲಹಗಳನ್ನು ಎದುರಿಸುತ್ತಿವೆ ಪ್ರತಿ ರಾಜ್ಯದಲ್ಲೂ ಇದೇ ಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. 

ಬಿಜೆಪಿ ಬಗ್ಗೆ ಮಾತನಾಡಿರುವ ಬಾದಲ್, ರಾಜಕೀಯದಲ್ಲಿ ನಾನು ಸಿಂಹವನ್ನು ಭೇಟಿ ಮಾಡಿದ್ದಾಗ ಅನೇಕ ಅವಕಾಶಗಳು ಬಂದಿತ್ತು. ಕೆಲವು ದಿನಗಳ ಹಿಂದೆ ಆ ಸಿಂಹವನ್ನು ಭೇಟಿ ಮಾಡಿದೆ. ಆ ಸಿಂಹದ ಹೆಸರು ಅಮಿತ್ ಶಾ. ಅವರು ಭೇಟಿ ವೇಳೆ ಪಂಜಾಬ್ ಕುರಿತು ಹೃದಯಸ್ಪರ್ಶಿ ಸಂಗತಿಗಳನ್ನು ಹೇಳಿದ್ದರು ಭಾರತಕ್ಕಾಗಿ ಪಂಜಾಬ್ 400 ದಾಳಿಗಳನ್ನು ಎದುರಿಸಿದೆ ಎಂದು ಅಮಿತ್ ಶಾ ಹೇಳಿದ್ದಾಗಿ ಬಾದಲ್ ಹೇಳಿದ್ದಾರೆ. 

ಬುಧವಾರದಂದು ಮನ್ಪ್ರೀತ್ ಸಿಂಗ್ ಬಾದಲ್ ಕಾಂಗ್ರೆಸ್ ಗೆ ರಾಜೀನಾಮೆ, ಪಂಜಾಬ್ ಕಾಂಗ್ರೆಸ್ ಘಟಕ ಗುಂಪುಗಾರಿಕೆಯನ್ನು ಬೆಂಬಲಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ರಾಹುಲ್ ಗಾಂಧಿಗೆ ಕಳಿಸಿದ ರಾಜೀನಾಮೆ ಪತ್ರದಲ್ಲಿ ಬಾದಲ್, "ಅತ್ಯಂತ ಬೇಸರಿಂದ ಪಕ್ಷ ತೊರೆಯುತ್ತಿದ್ದೇನೆ" ಎಂದು ಹೇಳಿದ್ದರು.

SCROLL FOR NEXT