ಸಂಗ್ರಹ ಚಿತ್ರ 
ದೇಶ

ದೂರು ದಾಖಲಾದ 32 ವರ್ಷಗಳ ಬಳಿಕ ತೀರ್ಪು: ಕಲಬೆರಕೆ ಹಾಲು ಮಾರಾಟ ಮಾಡಿದ್ದ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ!

ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಅಚ್ಚರಿ ವಿಷಯವೆಂದರೆ ದೂರು ದಾಖಲಾದ 32 ವರ್ಷಗಳ ಬಳಿಕ ತೀರ್ಪು ಹೊರಬಂದಿದೆ.

ಮುಜಫರ್‌ನಗರ: ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಅಚ್ಚರಿ ವಿಷಯವೆಂದರೆ ದೂರು ದಾಖಲಾದ 32 ವರ್ಷಗಳ ಬಳಿಕ ತೀರ್ಪು ಹೊರಬಂದಿದೆ.

ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಕುಮಾರ್ ಅವರು ಆರೋಪಿ ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ 5,000 ರೂ. ದಂಡ ವಿಧಿಸಿದೆ.

ಹರ್ಬೀರ್ ಸಿಂಗ್ ಕಲಬೆರಕೆ ಹಾಲು ಮಾರಾಟ ಮಾಡುತ್ತಿರುವುದು ಸಾಬೀತಾಗಿತ್ತು ಎಂದು ಪ್ರಾಸಿಕ್ಯೂಷನ್ ಅಧಿಕಾರಿ ರಾಮಾವತಾರ್ ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹರ್ಬೀರ್ ಸಿಂಗ್ ಮಾರಾಟ ಮಾಡಿದ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಕಲಬೆರಕೆ ಕಂಡುಬಂದಿತ್ತು ಎಂದು ಪ್ರಾಸಿಕ್ಯೂಷನ್ ಅಧಿಕಾರಿ ತಿಳಿಸಿದ್ದಾರೆ.

ಆಹಾರ ನಿರೀಕ್ಷಕ ಸುರೇಶ್ ಚಂದ್ ಅವರು ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ವಿರುದ್ಧ 1990ರ ಏಪ್ರಿಲ್ 21 ರಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು ಎಂದು ರಾಮಾವತಾರ್ ಸಿಂಗ್ ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

ಅಪ್ರಾಪ್ತ ಬಾಲಕಿ ಅತ್ಯಾಚಾರ, ಕೊಲೆಯಾಗಿದ್ರೂ ಪ್ರೆಸ್ ಮೀಟ್ ನಲ್ಲಿ ಪೊಲೀಸರ 'ಲಲ್ಲೆ': Video ವೈರಲ್, ಜನಾಕ್ರೋಶ!

ಅಕ್ರಮ ಸಂಬಂಧಕ್ಕೆ ಮೂವರು ಬಲಿ: ಪತ್ನಿ ಕೊಂದು ಪತಿ ಆತ್ಮಹತ್ಯೆ; ಮಹಿಳೆಯ ಪ್ರಿಯಕರನೂ ಸಾವಿಗೆ ಶರಣು!

ಮೇಕೆದಾಟು ಯೋಜನೆಗೆ ವಿಜಯ್ ಅಡ್ಡಗಾಲು: ಕಾನೂನು ಕ್ರಮ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ತಮಿಳುನಾಡು ಸಿಎಂ ಸೂಚನೆ

SCROLL FOR NEXT