ದೇಶ

ಭಾರತ್ ಜೋಡೋ ಯಾತ್ರೆ, ಗಣರಾಜ್ಯೋತ್ಸವಕ್ಕೆ ಸಿದ್ಧತೆ: ಬಿಗಿ ಭದ್ರತೆ ನಡುವೆಯೂ ಜಮ್ಮುನಲ್ಲಿ ಅವಳಿ ಸ್ಫೋಟ; 7 ಮಂದಿಗೆ ಗಾಯ

Vishwanath S

ಶ್ರೀನಗರ: ಕಣಿವೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ 15 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳು ಸಂಭವಿಸಿದ್ದು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರೆಲ್ಲರೂ 'ಸ್ಥಿರರಾಗಿದ್ದಾರೆ' ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಮತ್ತು ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಈ ಪ್ರದೇಶದಲ್ಲಿ ಭದ್ರತಾ ಏಜೆನ್ಸಿಗಳು ಹೆಚ್ಚು ಜಾಗರೂಕರಾಗಿರುವ ಸಮಯದಲ್ಲಿ ನರ್ವಾಲ್‌ನ ಸಾರಿಗೆ ಯಾರ್ಡ್‌ನಲ್ಲಿ ಶಂಕಿತ ಭಯೋತ್ಪಾದಕರು ಸ್ಫೋಟಗಳನ್ನು ನಡೆಸಿದ್ದಾರೆ.

ಮೊದಲ ಸ್ಫೋಟವು ಬೆಳಿಗ್ಗೆ 10.45ರ ಸುಮಾರಿಗೆ ಸಂಭವಿಸಿದ್ದು, ನಂತರ ಮತ್ತೊಂದು ಸ್ಫೋಟ ಸಂಭವಿಸಿತ್ತು. ಸ್ಫೋಟದ ನಂತರ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಪೇರಿಗಾಗಿ ವರ್ಕ್‌ಶಾಪ್‌ಗೆ ಕಳುಹಿಸಲಾಗಿದ್ದ ವಾಹನದಲ್ಲಿ ಮೊದಲ ಸ್ಫೋಟ ನಡೆಯಿತು ಎಂದು ಪ್ರತ್ಯಕ್ಷದರ್ಶಿ ಜಸ್ವಿಂದರ್ ಸಿಂಗ್ ಹೇಳಿದ್ದಾರೆ.

ಹದಿನೈದು ನಿಮಿಷಗಳ ನಂತರ, ಹತ್ತಿರದ ಮತ್ತೊಂದು ಸ್ಥಳದಲ್ಲಿ ಸ್ಫೋಟ ನಡೆದಿತ್ತು. 

SCROLL FOR NEXT