ಹಿಮಾಂತ ಬಿಸ್ವಾ ಶರ್ಮಾ 
ದೇಶ

ಶಾರೂಖ್ ಖಾನ್ ಯಾರು? ನನಗೆ ಅವರ ಬಗ್ಗೆ ಗೊತ್ತೇ ಇಲ್ಲ: ಹಿಮಂತ ಬಿಸ್ವ ಶರ್ಮ 

ಶಾರೂಖ್ ಖಾನ್ ಯಾರು? ನನಗೆ ಅವರ ಬಗ್ಗೆಯಾಗಲೀ ಅಥವಾ ಅವರ ಸಿನಿಮಾದ ಬಗ್ಗೆಯಾಗಲೀ ಏನೂ ಗೊತ್ತಿಲ್ಲ ಎಂದು ಅಸ್ಸಾಂ ನ ಸಿಎಂ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. 

ಗುವಾಹಟಿ: ಶಾರೂಖ್ ಖಾನ್ ಯಾರು? ನನಗೆ ಅವರ ಬಗ್ಗೆಯಾಗಲೀ ಅಥವಾ ಅವರ ಸಿನಿಮಾದ ಬಗ್ಗೆಯಾಗಲೀ ಏನೂ ಗೊತ್ತಿಲ್ಲ ಎಂದು ಅಸ್ಸಾಂ ನ ಸಿಎಂ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. 

ಗುವಾಹಟಿಯ ನರೇಂಗಿಯ ಥಿಯೇಟರ್ ಬಳಿ ಜಮಾಯಿಸಿದ ಬಜರಂಗದಳದ ಕಾರ್ಯಕರ್ತರು ಶಾರೂಖ್ ಖಾನ್ ಅವರ ಪಠಾಣ್ ಸಿನಿಮಾವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವ ಶರ್ಮಾ, ಖಾನ್ ನನಗೆ ಕರೆ ಮಾಡಿಲ್ಲ. ಹಲವು ಮಂದಿ ಬಾಲಿವುಡ್ ನವರು ಸಮಸ್ಯೆ ಬಗ್ಗೆ ಹೀಗೆ ಮಾಡುತ್ತಾರೆ, ಅವರು ಕರೆ ಮಾಡಿದಲ್ಲಿ ನಾನು ಗಮನಿಸುತ್ತೇನೆ ಎಂದು ಶರ್ಮಾ ಹೇಳಿದ್ದಾರೆ.
 
ಕಾನೂನು ಸುವ್ಯವಸ್ಥೆ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಶರ್ಮಾ ಎಚ್ಚರಿಸಿದ್ದಾರೆ. ಬಾಲಿವುಡ್ ನ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಬೇಶರಮ್ ಹಾಡಿನಲ್ಲಿ ಕೇಸರಿ ಬಿಕಿನಿ ಧರಿಸಿರುವುದಕ್ಕೆ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 

ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್ ಎಂದು ಪತ್ರಕರ್ತರು ಹೇಳಿದ್ದಕ್ಕೆ, ಪ್ರತಿಕ್ರಿಯಿಸಿದ ಶರ್ಮಾ, ಪತ್ರಕರ್ತರು ಕಾಳಜಿ ವಹಿಸಬೇಕಾದದ್ದು ಹಿಂದಿ ಸಿನಿಮಾಗಳ ಬಗ್ಗೆ ಅಲ್ಲ, ಅಸ್ಸಾಮಿಗಳ ಬಗ್ಗೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT