ದೇಶ

ಜನವರಿ 30ರಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ಧ್ವಜಾರೋಹಣ; ದೇಶದಾದ್ಯಂತ ರಾಷ್ಟ್ರಧ್ವಜ ಹಾರಿಸಲಿರುವ ಕಾಂಗ್ರೆಸ್

Ramyashree GN

ನವದೆಹಲಿ: ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕೊನೆಗೊಳಿಸುವ ದಿನವಾದ ಜನವರಿ 30 ರಂದು ಎಲ್ಲಾ ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, 'ಭಾರತ್ ಜೋಡೋ ಯಾತ್ರೆಯ ಕೊನೆ ದಿನದಂದು ಜನವರಿ 30 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಎಂದರು.

ಕಾಂಗ್ರೆಸ್ ಅಧ್ಯಕ್ಷರ ಅಪೇಕ್ಷೆಯಂತೆ, ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಭಾರತ್ ಜೋಡೋ ಯಾತ್ರೆಗೆ ಒಗ್ಗಟ್ಟಿನಿಂದ ಜನವರಿ 30 ರಂದು ತಮ್ಮ ತಮ್ಮ ಪಕ್ಷದ ಕಚೇರಿಗಳು ಅಥವಾ ಪ್ರಮುಖ ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳನ್ನು ನಡೆಸಲಿವೆ ಎಂದು ಅವರು ಹೇಳಿದರು.

2022ರ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು 3,970 ಕಿಮೀ ಮತ್ತು 12 ರಾಜ್ಯಗಳನ್ನು ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30 ರಂದು ಮುಕ್ತಾಯಗೊಳ್ಳಲಿದೆ.

ಭಾರತ್ ಜೋಡೋ ಯಾತ್ರೆಗೆ ಲಕ್ಷಾಂತರ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ ಮತ್ತು ದೇಶದ ನಾಗರಿಕರಲ್ಲಿ ರಾಹುಲ್ ಗಾಂಧಿಯವರ ಪ್ರೀತಿ ಮತ್ತು ಏಕತೆಯ ಸಂದೇಶ ಹರಡಿದೆ ಎಂದು ಪಕ್ಷ ಹೇಳಿಕೊಂಡಿದೆ.

ಸಮಾಜದ ಎಲ್ಲಾ ವರ್ಗಗಳ ಪ್ರಚಂಡ ಬೆಂಬಲ ಮತ್ತು ಜನರ ಹೃತ್ಪೂರ್ವಕ ಒಳಗೊಳ್ಳುವಿಕೆಯು ಯಾತ್ರೆಯನ್ನು ಐತಿಹಾಸಿಕ ಯಾತ್ರೆಯನ್ನಾಗಿ ಮಾಡಿದೆ ಮತ್ತು ಭಾರತದ ರಾಜಕೀಯದಲ್ಲಿ ಗೇಮ್ ಚೇಂಜರ್ ಆಗಿದೆ ಎಂದು ಕಾಂಗ್ರೆಸ್ ಹೇಳಿದೆ.

SCROLL FOR NEXT