ದೇಶ

ಕಾಶ್ಮೀರದ ಅವಂತಿಪೋರಾದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭ

Lingaraj Badiger

ಅವಂತಿಪೋರಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಕಾರಣದಿಂದ ನಿನ್ನೆ ಸ್ಥಗಿತಗೊಂಡಿದ್ದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶನಿವಾರ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಿಂದ ಪುನರಾರಂಭವಾಗಿದೆ.

ಇಂದು ಅವಂತಿಪೋರಾ ಮೂಲಕ ಭಾರತ್ ಜೋಡೋ ಯಾತ್ರೆ ಸಾಗುತ್ತಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಅವರ ಪುತ್ರಿ ಇಲ್ತಿಜಾ ಮುಫ್ತಿ ಮತ್ತು ಅವರ ಪಕ್ಷದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ರಾಹುಲ್ ಗಾಂಧಿಗೆ ಸಾಥ್ ನೀಡಿದರು.

ಈ ಯಾತ್ರೆಯಲ್ಲಿ ರಾಹಲ್ ಗಾಂಧಿ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸುವ ಸಾಧ್ಯತೆಯಿದೆ.

ಯಾತ್ರೆಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಅಧಿಕೃತ ವಾಹನಗಳು ಮತ್ತು ವರದಿಗಾರರನ್ನು ಮಾತ್ರ ಸ್ಥಳಕ್ಕೆ ತಲುಪಲು ಅನುಮತಿಸಲಾಗಿದೆ.

ಹೆಚ್ಚಿನ ಭದ್ರತಾ ಕ್ರಮಗಳ ಭಾಗವಾಗಿ ರಾಹುಲ್ ಗಾಂಧಿ ಸುತ್ತಲೂ ಮೂರು ಹಂತದ ಭದ್ರತೆ ಒದಗಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶದ ಪೊಲೀಸ್ ವ್ಯವಸ್ಥೆಗಳು "ಸಂಪೂರ್ಣ ವಿಫಲವಾಗಿವೆ" ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿತ್ತು. "ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಭದ್ರತೆ ಒದಗಿಸಲು ವಿಫಲವಾಗಿದೆ. ಭದ್ರತಾ ಲೋಪಗಳು ಕೇಂದ್ರಾಡಳಿತ ಅಸಮರ್ಥತೆ ಮತ್ತು ತಯಾರಿ ಇಲ್ಲದ ವರ್ತನೆಯನ್ನು ಸೂಚಿಸುತ್ತವೆ" ಎಂದು ಕಾಂಗ್ರೆಸ್ ಆರೋಪಿಸಿತ್ತು.

SCROLL FOR NEXT