ದೇಶ

'ಭಾರತ್ ಜೋಡೋ ಯಾತ್ರೆ'ಯ ಅಂತಿಮ ಸುತ್ತನ್ನು ಪುನರಾರಂಭಿಸಿದ ರಾಹುಲ್ ಗಾಂಧಿ

Ramyashree GN

ಶ್ರೀನಗರ: ಪಾದಯಾತ್ರೆ ಕೊನೆಯ ದಿನಕ್ಕೆ ಕಾಲಿಡುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಶ್ರೀನಗರದ ಪಂಥಾಚೌಕ್‌ನಿಂದ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದರು.

ರಾಹುಲ್ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 10.45ಕ್ಕೆ ತಮ್ಮ ಟ್ರೇಡ್‌ಮಾರ್ಕ್ ಬಿಳಿ ಟಿ-ಶರ್ಟ್‌ನಲ್ಲಿ ಯಾತ್ರೆಯನ್ನು ಪ್ರಾರಂಭಿಸಿದರು.

ತ್ರಿವರ್ಣ ಧ್ವಜ ಮತ್ತು ಪಕ್ಷದ ಧ್ವಜಗಳನ್ನು ಹಿಡಿದುಕೊಂಡಿದ್ದ ಮಹಿಳೆಯರು ಸೇರಿದಂತೆ ನೂರಾರು ಕಾಂಗ್ರೆಸ್ ಬೆಂಬಲಿಗರೊಂದಿಗೆ ಗಾಂಧಿಯವರು ಸೇರಿಕೊಂಡರು.

ಯಾತ್ರೆಯು ನಗರದ ಸೋನ್ವಾರ್ ಪ್ರದೇಶದವರೆಗೆ ಏಳು ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಅಲ್ಲಿ ಸ್ವಲ್ಪ ಸಮಯದ ನಂತರ, ಯಾತ್ರೆಯು ಚೌಕ್ ಸಿಟಿ ಸೆಂಟರ್ ಅನ್ನು ತಲುಪುತ್ತದೆ. ಲಾಲ್ ಚೌಕ್ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶವನ್ನು ಮುಚ್ಚಲಾಗಿದೆ ಮತ್ತು ನಗರ ಕೇಂದ್ರದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ಲಾಲ್ ಚೌಕ್ ನಂತರ ಯಾತ್ರೆಯು ನಗರದ ಬೌಲೆವಾರ್ಡ್ ಪ್ರದೇಶದ ನೆಹರೂ ಪಾರ್ಕ್‌ಗೆ ಸಂಚರಿಸಲಿದ್ದು, ಸೆ.7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು ದೇಶದ 75 ಜಿಲ್ಲೆಗಳಲ್ಲಿ ಸಂಚರಿಸಿದ 4,080 ಕಿ.ಮೀ. ಯಾತ್ರೆಯು ಕೊನೆಗೊಳ್ಳಲಿದೆ.

ಸೋಮವಾರ, ಇಲ್ಲಿನ ಎಂಎ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಗಾಂಧಿ ಅವರು ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. ನಂತರ ಎಸ್‌ಕೆ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಯಲಿದ್ದು, ಇದಕ್ಕಾಗಿ 23 ವಿರೋಧ ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ.

SCROLL FOR NEXT