ದೇಶ

ಹಿಂಡರ್ಬರ್ಗ್ ಸಂಶೋಧನೆ ವರದಿಗೆ ವಿಸ್ತೃತ ಪ್ರತಿಕ್ರಿಯೆ ನೀಡಿದ ಅದಾನಿ ಸಮೂಹ

Srinivas Rao BV

ಮುಂಬೈ: ಅದಾನಿ ಸಮೂಹದ ಷೇರುಗಳು ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದ ಟ್ರೇಡಿಂಗ್ ಸೆಷನ್ ಮಹತ್ವದ್ದಾಗಿದ್ದು, ಅದಾನಿ ಎಂಟರ್ ಪ್ರೈಸಸ್ ನ ಫಾಲೋ ಆನ್ ಆಫರ್ (ಎಫ್ ಪಿಒ) ಗೆ ನಿರ್ಣಾಯಕವಾಗಿದೆ. ಈ ನಡುವೆ ಭಾನುವಾರ ರಾತ್ರಿ ಹಿಂಡರ್ ಬರ್ಗ್ ನ ಸಂಶೋಧನಾ ವರದಿಗೆ ವಿಸ್ತೃತ ಪ್ರತಿಕ್ರಿಯೆ ನೀಡಿದೆ. 

ಅದಾನಿ ಸಮೂಹದ ವಿರುದ್ಧ ಹಿಂಡರ್ ಬರ್ಗ್ ನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಿಂಡರ್ ಬರ್ಗ್ ನದ್ದು ಬಣ್ಣ ವದಂತಿಗಳನ್ನು ವಾಸ್ತವ ಎಂದು ಹೇಳುವ ಯತ್ನವಾಗಿದೆ ಎಂದು ಹೇಳಿದೆ.

ವರದಿಯಲ್ಲಿ ಕೇಳಲಾದ 88 ಪ್ರಶ್ನೆಗಳ ಪೈಕಿ 65 ಪ್ರಶ್ನೆಗಳಿಗೆ ಉತ್ತರ, ಈಗಾಗಲೇ ಅದಾನಿ ಪೋರ್ಟ್ ಫೋಲಿಯೋ ಸಂಸ್ಥೆಗಳು ವಾರ್ಷಿಕ ವರದಿಯಲ್ಲಿ ವೆಬ್ ಸೈಟ್ ಮೂಲಕ ಬಹಿರಂಗಪಡಿಸಲಾಗಿದೆ. ಕಾಲ ಕಾಲಕ್ಕೆ ಸ್ಟಾಕ್ ವಿನಿಮಯ ಬಹಿರಂಗಪಡಿಸುವಿಕೆಗಳನ್ನು ಆರ್ಥಿಕ ಹೇಳಿಕಳನ್ನು ಆಫರಿಂಗ್ ಮೆಮರೆಂಡಮ್ ಗಳನ್ನು ಬಹಿರಂಗಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಶಾರ್ಟ್ ಸೆಲ್ಲರ್ ವಿವಾದದ ನಡುವೆ ಎಫ್ ಪಿಒ ಮುಂದುವರೆಸಲು ಅದಾನಿ ನಿರ್ಧಾರ
 
ಪಾರ್ಟಿ ಹಾಗೂ ಇನ್ನಿತರ ವಹಿವಾಟುಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ ಈ ವಹಿವಾಟುಗಳು ಕಾನೂನಿನ ಚೌಕಟ್ಟಿನಲ್ಲಿಯೇ ಇವೆ ಅವುಗಳನ್ನು ಸರಿಯಾದ ವಾಣಿಜ್ಯ ನಿಯಮಗಳೊಂದಿಗೆ ಬಹಿರಂಗಪಡಿಸಲಾಗಿದೆ ಎಂದು ಸಂಸ್ಥೆ ಹಿಂಡರ್ ಬರ್ಗ್ ನ ವರದಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. 

ಸಂಸ್ಥೆಯ ಈ ಪ್ರಕಟಣೆಗಳನ್ನು ಯಾರೋ ಅಪರಿಚಿತ ವಿದೇಶಿ ಶಾರ್ಟ್ ಸೆಲ್ಲರ್ ಗಳ ಬದಲಾಗಿ ಪರಿಶೀಲಿಸಲು ಅರ್ಹರು ಮತ್ತು ಸಮರ್ಥರು ಈಗಾಗಲೇ ಮೂರನೇ ವ್ಯಕ್ತಿಗಳು ಅನುಮೋದಿಸಿದ್ದಾರೆ ಹಾಗೂ ಅದು ಅನ್ವಯವಾಗುವ ಲೆಕ್ಕಪತ್ರ ಮಾನದಂಡಗಳು ಮತ್ತು ಅನ್ವಯವಾಗುವ ಕಾನೂನಿಗೆ ಅನುಗುಣವಾಗಿರುತ್ತವೆ" ಎಂದು ಅದಾನಿ ಸಂಸ್ಥೆ ಹಿಂಡನ್ ಬರ್ಗ್ ವರದಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದೆ.

SCROLL FOR NEXT