ದೇಶ

ನೀವು ನನ್ನನ್ನು ಹಿಂದೂ ಎಂದೇ ಕರೆಯಬೇಕು: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

Manjula VN

ತಿರುವನಂತಪುರ: ಹಿಂದೂ ಎನ್ನುವುದು ಧಾರ್ಮಿಕ ಪದವಲ್ಲ. ಯಾವುದೋ ಧರ್ಮವನ್ನು ಸೂಚಿಸುವ ಪದವಲ್ಲ. ಬದಲಿಗೆ ಅದು ಭೌಗೋಳಿಕ ಪದ. ಭಾರತದಲ್ಲಿ ಹುಟ್ಟಿದವರು, ಭಾರತದಲ್ಲಿ ಬೆಳೆಯುವ ಆಹಾರವನ್ನು ಸೇವಿಸುವವರು, ಭಾರತದ ನದಿಗಳ ನೀರನ್ನು ಕುಡಿದವರೆಲ್ಲರೂ ಹಿಂದೂಗಳೇ. ಹಾಗಾಗಿ ನೀವು ನನ್ನನ್ನು ಕೂಡ ಹಿಂದೂ ಎಂದು ಕರೆಯಬೇಕು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಹೇಳಿದ್ದಾರೆ.

ತಿರುವನಂತಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಆರ್ಯ ಸಮಾಜ ನನಗೆ ನೀಡಿರುವ ಸ್ವಾಗತಕ್ಕೆ ನಾನು ಆಭಾರಿಯಾಗಿದ್ದೇನೆಂದು ಹೇಳಿದರು. ಬಳಿಕ ನನ್ನ ಬಳಿ ದೂರು ಇದೆ ಎಂದು ಹೇಳಿದ ಅವರು, ನನ್ನನ್ನು ನೀವೇಕೆ ಹಿಂದೂ ಎನ್ನುವುದಿಲ್ಲ ಎಂದು ಪ್ರಶ್ನಿಸಿದರು.

'ನಾನು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದೆನೆ. ಹಿಂದು ಎನ್ನುವುದು ಧಾರ್ಮಿಕ ಪದವಲ್ಲ. ಯಾವುದೋ ಧರ್ಮವನ್ನು ಸೂಚಿಸುವ ಪದವಲ್ಲ. ಬದಲಿಗೆ ಅದು ಭೌಗೋಳಿಕ ಪದ. ಭಾರತದಲ್ಲಿ ಹುಟ್ಟಿದವರು, ಭಾರತದಲ್ಲಿ ಬೆಳೆಯುವ ಆಹಾರವನ್ನು ಸೇವಿಸುವವರು, ಭಾರತದ ನದಿಗಳ ನೀರನ್ನು ಕುಡಿದವರೆಲ್ಲರೂ ಹಿಂದುಗಳೇ. ಹಾಗಾಗಿ ನೀವು ನನ್ನನ್ನು ಕೂಡ ಹಿಂದು ಎಂದು ಕರೆಯಬೇಕು ಎಂದು ಹೇಳಿದರು.

ಇದೇ ವೇಳೆ ಹಿಂದೂ ಸಮ್ಮೇಳನದಲ್ಲಿ ಸರ್ ಸೈಯದ್ ಅಹ್ಮದ್ ಖಾನ್ ಮಾತನಾಡಿದ್ದನ್ನು ರಾಜ್ಯಪಾಲರು ಉಲ್ಲೇಖಿಸಿದರು. ಸರ್ ಸೈಯದ್ ಅಹ್ಮದ್ ಖಾನ್ ಒಬ್ಬ ಸುಧಾರಕ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಎಂದು ಅವರು ಹೇಳಿದರು.

ಜೊತೆಗೆ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆಯೂ ಮಾತನಾಡಿದ ಅವರು, ಭಾರತದಲ್ಲಿ ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದಾಗ ಆದ ವಿಚಾರಗಳ ಬಗ್ಗೆ ಏಕೆ ಸಾಕ್ಷ್ಯಚಿತ್ರ ಮಾಡೋದಿಲ್ಲ. ಕಲಾವಿದನ ಕೈ ಕತ್ತರಿಸಿದಾಗ ನೀವು ಏಕೆ ಸಾಕ್ಷ್ಯಚಿತ್ರ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ಭಾರತ ಮತ್ತೆ ಒಡೆದುಹೋಗುತ್ತದೆ. ಆಂತರಿಕವಾಗಿ ಘರ್ಷಣೆ ಮಾಡಿಕೊಳ್ಳುತ್ತದೆ ಎಂದು ಭವಿಷ್ಯ ನುಡಿದವರಿಗೆ ಬಹಳ ನಿರಾಸೆಯಾಗಿರಬೇಕು. ಯಾಕೆಂದರೆ, ಭಾರತ ಉತ್ತಮ ರೀತಿಯಲ್ಲಿ ಪ್ರಗತಿಯಾಗುತ್ತಿರುವುದನ್ನು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ವಿಶ್ವದಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ, ಹೀಗಾಗಿ ಈ ಜನರಿಗೆ ನಿರಾಸೆಯಾಗಿದೆ. ಇಂತಹ ವರದಿ ನೀಡುತ್ತಿರವವರಿಗೆ ನನ್ನ ಬಳಿ ಒಂದು ಪ್ರಶ್ನೆಯಿದೆ. ಭಾರತದಲ್ಲಿ ಬ್ರಿಟಿಷರು ಮಾಡಿದ ದೌರ್ಜನ್ಯದ ಬಗ್ಗೆ ನೀವೇಕೆ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡೋದಿಲ್ಲ. ಇನ್ನೂ ಒಂದು ಆಘಾತಕಾರಿ ವಿಚಾರವೆಂದರೆ ನಮ್ಮದೇ ದೇಶದ ಕೆಲವು ಜನ ನಮ್ಮ ನ್ಯಾಯಾಂಗ ವ್ಯವಸ್ಥೆ ನೀಡಿದ್ದ ತೀರ್ಪನ್ನೇ ಒಪ್ಪುವುದಿಲ್ಲ. ಯಾವುದೋ ಸಾಕ್ಷ್ಯಚಿತ್ರದ ಚಿತ್ರಣವನ್ನು ಅಪ್ಪಿಕೊಳ್ಳುತ್ತಾರೆಯೇ ಎಂದು ವ್ಯಂಗ್ಯವಾಡಿದರು.

SCROLL FOR NEXT