ದೇಶ

ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ವಿವಾಹಿತನಾಗಿರಬೇಕು; ಇದು ಲಾಲು ಷರತ್ತು!

Lingaraj Badiger

ನವದೆಹಲಿ: ಆರ್ ಜೆಡಿ ವರಿಷ್ಠ, ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಬಗ್ಗೆ ಮತ್ತು ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮದುವೆಯಾಗಲು ತಾವು ನೀಡಿದ ಸಲಹೆಯ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌ಜೆಡಿ ಮುಖ್ಯಸ್ಥ, "ಯಾರೇ ಪ್ರಧಾನಿಯಾದರೂ ಅವರಿಗೆ ಪತ್ನಿ ಇರಬೇಕು. ಪತ್ನಿ ಇಲ್ಲದೆ ಪ್ರಧಾನಿ ನಿವಾಸದಲ್ಲಿ ಇರುವುದು ತಪ್ಪು. ಇದನ್ನು ಸರಿಪಡಿಸಬೇಕು..." ಎಂದಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಎಷ್ಟು ಸೀಟುಗಳು ಬರುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿದ ಲಾಲು, ‘ಕನಿಷ್ಠ 300’ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಉತ್ತರಿಸಿದರು.

ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ಮದುವೆಗೆ ನಿರಾಕರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮದುವೆಯಾಗುವಂತೆ ಸಲಹೆ ನೀಡಿದ್ದರು. ನೀವು ಮದುವೆಯಾಗಲು ನಿರಾಕರಿಸುತ್ತಿರುವುದರಿಂದ ನಿಮ್ಮ ತಾಯಿ ಚಿಂತಿತರಾಗಿದ್ದಾರೆ" ಎಂದು ಹೇಳಿದ್ದರು.

SCROLL FOR NEXT