ದೇಶ

ಜೂನ್ ನಲ್ಲಿ ದೇಶಿಯ ವಿಮಾನ ಪ್ರಯಾಣಿಕರ ಸಂಖ್ಯೆ ಶೇ.19 ರಷ್ಟು ಏರಿಕೆ

Srinivas Rao BV

ಮುಂಬೈ: ದೇಶೀಯವಾಗಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಜೂ ನಲ್ಲಿ ಶೇ.19 ರಷ್ಟು ಏರಿಕೆ ಕಂಡಿದೆ.  ವರ್ಷದ ಹಿಂದೆ ಇದೇ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ  ಶೇ.18.78 ರಷ್ಟಿತ್ತು ಎಂದು ಅಧಿಕೃತ ಡೇಟಾ ಮೂಲಕ ತಿಳಿದುಬಂದಿದೆ. 

ಜೂನ್ ನಲ್ಲಿ ಇಂಡಿಗೋ, ಏರ್ ಇಂಡಿಯಾ, ವಿಸ್ತಾರ, ಏರ್ ಏಷ್ಯಾ ಇಂದಿಯಾ ಹಾಗೂ ಆಕಾಶಾ ಏರ್ ತಮ್ಮ ಸಂಸ್ಥೆಗಳ ಮಾರುಕಟ್ಟೆಯ ಪಾಲು ಏರಿಕೆಯನ್ನು ಕಂಡಿವೆ. 

ಆದರೆ ಸ್ಪೈಸ್ ಜೆಟ್ ಮಾರುಕಟ್ಟೆ ಪಾಲುದಾರಿಗೆ ಇಳಿಮುಖವಾಗಿದ್ದು, ಜನವರಿಯಲ್ಲಿ ಶೇ.7.3 ರಷ್ಟಿದ್ದದ್ದು ಈಗ ಕಳೆದ ತಿಂಗಳು ಶೇ.4.4 ಕ್ಕೆ ಇಳಿಕೆಯಾಗಿದೆ.
 
ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಂಕಿಅಂಶಗಳ ಪ್ರಕಾರ ದೇಶೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ಜೂನ್‌ನಲ್ಲಿ 124.87 ಲಕ್ಷ ಜನರು ಪ್ರಯಾಣಿಸಿದ್ದು, ವರ್ಷದ ಹಿಂದೆ ಇದೇ ಅವಧಿಯಲ್ಲಿ 105.12 ಲಕ್ಷ ಮಂದಿ ಪ್ರಯಾಣಿಸಿದ್ದರು. 

SCROLL FOR NEXT