ದೇಶ

ಶಿವಸೇನೆಯೊಂದಿಗೆ ಭಾವನಾತ್ಮಕ, ಎನ್‌ಸಿಪಿ ಜತೆ ರಾಜಕೀಯ ಮೈತ್ರಿ: ಫಡ್ನವಿಸ್

Lingaraj Badiger

ಮುಂಬೈ: ಭಾರತೀಯ ಜನತಾ ಪಕ್ಷವು ಶಿವಸೇನೆಯೊಂದಿಗೆ ಭಾವನಾತ್ಮಕ ಮೈತ್ರಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಂಡಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ತಯಾರಿಯ ಭಾಗವಾಗಿ ಭಿವಂಡಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ `ಮಹಾವಿಜಯ್ 2024' ಕಾರ್ಯಾಗಾರದಲ್ಲಿ ಮಾತನಾಡಿದ ಮಹಾ ಡಿಸಿಎಂ, ಬಿಜೆಪಿ ಸೇರಲು ಇಚ್ಛಿಸುವವರನ್ನು ಸ್ವಾಗತಿಸಬಹುದು. ಆದರೆ "ಕಾಂಗ್ರೆಸ್ ತರಹದ ಚಿಂತನೆ"ಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

"ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ನಮ್ಮ ಮೈತ್ರಿ ಭಾವನಾತ್ಮಕ ಮೈತ್ರಿಯಾಗಿದೆ. ಬಿಜೆಪಿ ಮತ್ತು ಸೇನೆಯು 25 ವರ್ಷಗಳಿಂದ ಒಟ್ಟಿಗೆ ಇವೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯೊಂದಿಗಿನ ಮೈತ್ರಿ ರಾಜಕೀಯ ಮೈತ್ರಿಯಾಗಿದೆ" ಎಂದು ಫಡ್ನವೀಸ್ ಹೇಳಿದ್ದಾರೆ.

ಮುಂದಿನ 10-15 ವರ್ಷಗಳಲ್ಲಿ ನಾವು ಎನ್‌ಸಿಪಿಯೊಂದಿಗೂ ನಾವು ಭಾವನಾತ್ಮಕ ಮೈತ್ರಿ ಬೆಳೆಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT