ದೇಶ

ಸಾರ್ವಕಾಲಿಕ ದಾಖಲೆ ಬರೆದ ಜೂನ್; ಕಳೆದ ತಿಂಗಳು ಭೂಮಿ ಮೇಲೆ ಅತಿ ಹೆಚ್ಚು ತಾಪಮಾನ ದಾಖಲು!

Lingaraj Badiger

ನವದೆಹಲಿ: ನಾಸಾ ಮತ್ತು ಎನ್‌ಒಎಎ ಸೇರಿದಂತೆ ವಿಜ್ಞಾನಿಗಳ ಸ್ವತಂತ್ರ ವಿಶ್ಲೇಷಣೆಯ ಪ್ರಕಾರ, ಜೂನ್ ತಿಂಗಳ ತಾಪಮಾನ ಸಾರ್ವಕಾಲಿಕ ದಾಖಲೆ ಬರೆದಿದ್ದು, ಕಳೆದ ತಿಂಗಳು 174 ವರ್ಷಗಳ ನಂತರ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.

ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್(NOAA) ಸಹ ಇದು ವಾಸ್ತವಿಕವಾಗಿ ಖಚಿತವಾಗಿದೆ(ಶೇ. 99ಕ್ಕಿಂತ ಹೆಚ್ಚು) ಮತ್ತು 2023, ಅತಿ ಹೆಚ್ಚು ತಾಪಮಾನ ದಾಖಲಾದ ಟಾಪ್ 10 ವರ್ಷಗಳಲ್ಲಿ ಸ್ಥಾನ ಪಡೆಯುತ್ತದೆ ಎಂದು ಹೇಳಿದ್ದಾರೆ.

ಎಲ್ ನಿನೊ ಹವಾಮಾನದ ಮಾದರಿಯು ಈ ವರ್ಷ ತಾಪಮಾನ ಹೆಚ್ಚಾಗಲು ಒಂದು ಕಾರಣವಾಗಿದೆ ಎಂದು NOAA ಹೇಳಿದೆ.

ಆವರ್ತಕ ಮಾದರಿಯು ಪೆಸಿಫಿಕ್ ಸಾಗರದಲ್ಲಿ ನೀರು ಸಾಮಾನ್ಯಗಿಂತ ಹೆಚ್ಚು ಬಿಸಿಯಾಗಲು ಕಾರಣವಾಗುತ್ತದೆ ಮತ್ತು ಹೆಚ್ಚುವರಿ ಶಾಖವು ಪ್ರಪಂಚದಾದ್ಯಂತ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತದೆ.

ಯುರೋಪಿಯನ್ ಯೂನಿಯನ್‌ನ ಕೋಪರ್ನಿಕಸ್ ಹವಾಮಾನ ಬದಲಾವಣೆ ಸರ್ವಿಸಸ್ ಪ್ರಕಾರ, ಈ ವರ್ಷ ಜೂನ್ ತಿಂಗಳಲ್ಲಿ 1991-2020 ರ ಸರಾಸರಿಗಿಂತ 0.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ಜಾಗತಿಕವಾಗಿ ದಾಖಲಾಗಿದೆ.

ಜಾಗತಿಕವಾಗಿ, ಜೂನ್ 2023, 174 ವರ್ಷಗಳಲ್ಲೇ ಅತಿ ಹೆಚ್ಚು ತಾಪಮಾನ ದಾಖಲಾದ ತಿಂಗಳು ಎಂದು ಎನ್ಒಎಎ ತಿಳಿಸಿದೆ.

ಎನ್‌ಒಎಎಯ ರಾಷ್ಟ್ರೀಯ ಪರಿಸರ ಮಾಹಿತಿ ಕೇಂದ್ರಗಳ(ಎನ್‌ಸಿಇಐ) ವಿಜ್ಞಾನಿಗಳ ಪ್ರಕಾರ, ಜೂನ್‌ನಲ್ಲಿ ಜಾಗತಿಕ ಮೇಲ್ಮೈ ತಾಪಮಾನವು 20ನೇ ಶತಮಾನದ ಸರಾಸರಿ 15.5 ಡಿಗ್ರಿ ಸೆಲ್ಸಿಯಸ್ ಗಿಂತ 1.05 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ.

SCROLL FOR NEXT