ಸಾಂದರ್ಭಿಕ ಚಿತ್ರ 
ದೇಶ

ಕುನೋದಲ್ಲಿ 8 ಚೀತಾ ಸಾವು, ಆದರೂ ಅವುಗಳನ್ನು ಸ್ಥಳಾಂತರಿಸುವುದಿಲ್ಲ ಎಂದ ಕೇಂದ್ರ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಎಂಟು ಚೀತಾಗಳು ಸಾವನ್ನಪ್ಪಿವೆ. ಆದರೂ ನಮೀಬಿಯಾ ಚೀತಾಗಳನ್ನು ಸ್ಥಳಾಂತರಿಸುವುದಿಲ್ಲ ಮತ್ತು ಈ ಯೋಜನೆಯು ಯಶಸ್ವಿಯಾಗಲಿದೆ...

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಎಂಟು ಚೀತಾಗಳು ಸಾವನ್ನಪ್ಪಿವೆ. ಆದರೂ ನಮೀಬಿಯಾ ಚೀತಾಗಳನ್ನು ಸ್ಥಳಾಂತರಿಸುವುದಿಲ್ಲ ಮತ್ತು ಈ ಯೋಜನೆಯು ಯಶಸ್ವಿಯಾಗಲಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರು ಶನಿವಾರ ಹೇಳಿದ್ದಾರೆ.

“ನಾವು ಅಂತಾರಾಷ್ಟ್ರೀಯ ತಜ್ಞರು ಸೇರಿದಂತೆ ಹಲವು ತಜ್ಞರೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮ ತಂಡ ಅಲ್ಲಿಗೆ ಭೇಟಿ ನೀಡಲಿದೆ. ಚೀತಾಗಳನ್ನು ಸ್ಥಳಾಂತರಿಸುವುದಿಲ್ಲ. ಅವು ಕುನೋದಲ್ಲೇ ಇರಲಿವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಚೀತಾ ಯೋಜನೆಯ ಬಗ್ಗೆ ಕೆಲವು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಯಾದವ್ ಅವರು ಈ ಹೇಳಿಕೆ ನೀಡಿದ್ದು, ರೇಡಿಯೊ ಕಾಲರ್‌ಗಳಿಂದ ಉಂಟಾದ ಸೋಂಕಿನಿಂದ ಚೀತಾಗಳು ಮೃತಪಟ್ಟಿರಬಹುದು. ಆದರೆ ಇದು ಹೆಚ್ಚು ಅಸಾಮಾನ್ಯ ಮತ್ತು ಎರಡು ದಶಕಗಳಿಂದ ಭಾರತದಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ಈ ಕಾಲರ್‌ಗಳನ್ನು ಬಳಸಲಾಗುತ್ತಿದೆ.

ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿಯು ಚೀತಾಗಳ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸುತ್ತದೆ ಎಂದು ಇತರ ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

International Yoga Day 2026: ವಯಸ್ಸನ್ನು ಮೀರಿಸುವ ಆರೋಗ್ಯದ ಮಂತ್ರ ಯೋಗ, 50ಕ್ಕಿಂತ 70ರ ವಯಸ್ಸಿನಲ್ಲಿ ಹೆಚ್ಚು ಆರೋಗ್ಯವಂತರಾಗೋಣ: ಪ್ರಧಾನಿ ಮೋದಿ

Hormuz ಜಲಸಂಧಿಯಲ್ಲಿ ಅಮೆರಿಕಾ ಹೊಸ ಷರತ್ತು: ಭದ್ರತೆ ಬೇಕಾದರೆ ಸುಂಕ ಕಟ್ಟಿ, ಇಲ್ಲದಿದ್ದರೆ ನಿಮ್ಮ ಹಡಗುಗಳ ನೀವೇ ರಕ್ಷಿಸಿಕೊಳ್ಳಿ; ಹೊಸ ತೆರಿಗೆ ಬಾಂಬ್ ಸಿಡಿಸಿದ ಟ್ರಂಪ್

ಹೈಟೆಕ್ ಭ್ರಷ್ಟಾಚಾರ; PhonePe ಮೂಲಕ ಲಂಚ ಪಡೆದ EPFO ಸಿಬ್ಬಂದಿಗೆ 3 ವರ್ಷ ಕಠಿಣ ಜೈಲು, ದುಬಾರಿ ದಂಡ: CBI ವಿಶೇಷ ಕೋರ್ಟ್ ಮಹತ್ವದ ತೀರ್ಪು

ಎಲ್ಲೆಂದ್ರಲ್ಲಿ ಗಾಡಿ ನಿಲ್ಸೋ ಸವಾರರೇ ಎಚ್ಚರ: ಟೋಯಿಂಗ್ ಕಾರ್ಯಾಚರಣೆ ಮತ್ತೆ ಆರಂಭ!

Met Gala: ಅಮೆರಿಕ ಪ್ರವಾಸದ ವೇಳೆ ಚಿತ್ರ ನಿರ್ಮಾಪಕಿ Rhea Kapoor ರ ₹1.35 ಕೋಟಿ ಮೌಲ್ಯದ ವಜ್ರದ ಕಿವಿಯೋಲೆ ನಾಪತ್ತೆ