ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶದಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ

ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ ಭಾರತೀಯ ಸೇನಾ ಸಂಸ್ಥೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಶಂಕಿತ  ಐಎಸ್‌ಐ ಏಜೆಂಟ್‌ನನ್ನು ಭಾನುವಾರ ಲಖನೌದಲ್ಲಿ ಬಂಧಿಸಲಾಗಿದೆ

ಲಖನೌ: ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ ಭಾರತೀಯ ಸೇನಾ ಸಂಸ್ಥೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಶಂಕಿತ  ಐಎಸ್‌ಐ ಏಜೆಂಟ್‌ನನ್ನು ಭಾನುವಾರ ಲಖನೌದಲ್ಲಿ ಬಂಧಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಗೊಂಡಾ ನಿವಾಸಿ ರಯೀಸ್ ಎಂಬಾತನನ್ನುಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ  ಬಂಧಿಸಿದೆ.

ಆತನನ್ನು ಎಟಿಎಸ್ ಕೇಂದ್ರ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದಾಗ ಬೇಹುಗಾರಿಕೆಯಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಡಿಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂಬೈನಲ್ಲಿ ರಯೀಸ್  ಒಬ್ಬನ ಸಂಪರ್ಕಕ್ಕೆ ಬಂದಿದ್ದು, ಆತ ಭಾರತದ ವಿರುದ್ಧ ಗೂಢಚಾರಿಕೆ ಮಾಡಲು ಮನವೊಲಿಸಿದ್ದ. ಅಲ್ಲದೇ ಪಾಕ್ ಪ್ರಜೆಯಿಂದ ದುಬೈನಲ್ಲಿ ಹಣ ಮತ್ತು ಉದ್ಯೋಗದ ಭರವಸೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

2022 ರಲ್ಲಿ ರಯೀಸ್ ಗೆ ವಿದೇಶಿ ಸಂಖ್ಯೆಯಿಂದ ವಾಟ್ಸಾಪ್  ನಲ್ಲಿ ಕರೆಯೊಂದು ಬಂದಿದ್ದು, ಹುಸೇನ್ ಸಂಪರ್ಕಿಸಲು ಹೇಳಲಾಗಿತ್ತು. ನಂತರ ಭಾರತದ ಪ್ರಮುಖ ಮಿಲಿಟರಿ ಸ್ಥಳಗಳ ಚಿತ್ರಗಳನ್ನು ಕಳುಹಿಸಲು ಆತನಿಗೆ ಹೇಳಲಾಗಿತ್ತು. ಸಲ್ಮಾನ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿ ಕೂಡ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಯೀಸ್‌ಗೆ 15,000 ರೂಪಾಯಿ ಸಿಕ್ಕಿದ್ದು, ಬಾಂಗ್ಲಾದೇಶ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಐಎಸ್‌ಐ ಜೊತೆ ಸಂಪರ್ಕದಲ್ಲಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಯೀಸ್ ವಿರುದ್ಧ  ಭಾರತೀಯ ದಂಡ ಸಂಹಿತೆ 121ಎ ಮತ್ತು 123  ಮತ್ತು ಅಧಿಕಾರಿಗಳ ರಹಸ್ಯ ಕಾಯಿದೆ, 1923 ರ ಅಡಿಯಲ್ಲಿ ಲಖನೌ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.ಅಪರಿಚಿತ ವ್ಯಕ್ತಿ ಮತ್ತು ಸಲ್ಮಾನ್‌ನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

India- US Relationship: ನಿಮ್ಮ ಭಾವನೆಗಳನ್ನು ಆಳವಾಗಿ ಗೌರವಿಸುತ್ತೇನೆ-ಬೆಂಬಲಿಸುತ್ತೇನೆ: ಸದಾಕಾಲ ಸ್ನೇಹಿತನಾಗಿರುತ್ತೇನೆಂದ ಟ್ರಂಪ್'ಗೆ ಮೋದಿ ಉತ್ತರ

ಮೋದಿ ಉತ್ತಮ-ಅದ್ಭುತ ಪ್ರಧಾನಿ, ಅವರೊಂದಿಗೆ ಎಂದಿಗೂ ಸ್ನೇಹಿತರಾಗಿರುತ್ತೇನೆ, ಭಾರತ-ಅಮೆರಿಕಾ ನಡುವೆ ವಿಶೇಷ ಬಾಂಧವ್ಯವಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

EVM ಬದಲು ಬ್ಯಾಲಟ್ ಪೇಪರ್ ಬಳಕೆಗೆ ನಿರ್ಧಾರ: ಸರ್ಕಾರದ ವಿರುದ್ಧ BJP ವಾಗ್ದಾಳಿ, ನಮ್ಮ ಅನುಭವದ ಮೇಲೆ ತೀರ್ಮಾನಿಸಿದ್ದೇವೆಂದ ಸಿಎಂ ಸಿದ್ದರಾಮಯ್ಯ

ಇಸ್ಲಾಂ ಎಂದರೆ ಶಾಂತಿ, ಬಸವಣ್ಣರಂತೆ ಪ್ರವಾದಿಗಳು ಕೆಲಸ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ

2 ಕೋಟಿ ರೂ. ಅನುದಾನಕ್ಕೆ ಕೃಷಿ ಸಚಿವರೇ ಸಿಎಂ ಬಳಿ ಅಂಗಲಾಚಬೇಕೆಂದರೆ ಸರ್ಕಾರ ಎಷ್ಟು ದಿವಾಳಿಯಾಗಿದೆ ಎಂದು ನೀವೇ ಊಹಿಸಿಕೊಳ್ಳಿ..!

SCROLL FOR NEXT