ದೇಶ

ಮುಂಗಾರು ಅಧಿವೇಶನ: 31 ಮಸೂದೆಗಳ ಅಂಗೀಕಾರ ಪಡೆಯುವತ್ತ ಕೇಂದ್ರದ ಗಮನ, ವಿಪಕ್ಷಗಳ ಬಳಿ ಇದೆ ಮಹತ್ವದ ರಾಷ್ಟ್ರೀಯ ವಿಷಯಗಳು! 

Srinivas Rao BV

ನವದೆಹಲಿ: ಮುಂಗಾರು ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಪ್ರತಿಪಕ್ಷಗಳ INDIA ಮೈತ್ರಿಕೂಟ ರಚನೆಯಾಗಿದ್ದು, ಕೇಂದ್ರ ಸರ್ಕಾರವನ್ನು ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸದನದಲ್ಲೂ ಒಗ್ಗೂಡಲಿವೆ. 

ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ 31 ಮಸೂದೆಗಳಿಗೆ ಅಂಗೀಕಾರ ಪಡೆಯುವ ಯೋಜನೆ ಹೊಂದಿದ್ದರೆ, ಪ್ರತಿಪಕ್ಷಗಳು ಮಣಿಪುರದಲ್ಲಿನ ಹಿಂಸಾಚಾರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲು ಸಿದ್ಧತೆ ನಡೆಸಿವೆ.

ಇದಷ್ಟೇ ಅಲ್ಲದೇ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಜೂ.02 ರಂದು ನಡೆದ ದುರಂತದ ಘಟನೆಯನ್ನಿಟ್ಟುಕೊಂಡು ರೈಲು ಸುರಕ್ಷತೆಯ ವಿಷಯವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಲಿವೆ. 

ಉಳಿದಂತೆ ಚೀನಾ ಗಡಿ, ನಿರುದ್ಯೋಗ, ಹಣದುಬ್ಬರ ಪ್ರತಿಪಕ್ಷಗಳ ಬತ್ತಳಿಕೆಯಲ್ಲಿರುವ ಪ್ರಮುಖ ಅಂಶಗಳಾಗಿವೆ.
 
ಇನ್ನು, ದೆಹಲಿಯ ಆಡಳಿತಾತ್ಮಕ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನೂ ಉಲ್ಲಂಘಿಸಿ ಸುಗ್ರೀವಾಜ್ಞೆ ಹೊರಡಿಸಿದ್ದ ಕೇಂದ್ರ ಸರ್ಕಾರ  ಆಮ್ ಆದ್ಮಿ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಇದೂ ಸಹ ಪ್ರಮುಖ ವಿಷಯವಾಗಲಿದೆ. ಮುಂಗಾರು ಅಧಿವೇಶನ ಆಗಸ್ಟ್ 11 ವರೆಗೆ ನಡೆಯಲಿದೆ. 
 

SCROLL FOR NEXT