ಸಾಂದರ್ಭಿಕ ಚಿತ್ರ 
ದೇಶ

ಜೈಪುರ: 30 ನಿಮಿಷಗಳಲ್ಲಿ ಮೂರು ಬಾರಿ ಕಂಪಿಸಿದ ಭೂಮಿ!

ನಗರದಲ್ಲಿ ಶುಕ್ರವಾರ ಕೇವಲ ಅರ್ಧ ಗಂಟೆ ಅವಧಿಯಲ್ಲಿ ಮೂರು ಬಾರಿ ಭೂಕಂಪದ ಅನುಭವ ಆಗಿದ್ದು, ಜನರು ಆತಂಕಗೊಂಡಿರುವ ಬಗ್ಗೆ ವರದಿಯಾಗಿದೆ.

ಜೈಪುರ: ನಗರದಲ್ಲಿ ಶುಕ್ರವಾರ ಕೇವಲ ಅರ್ಧ ಗಂಟೆ ಅವಧಿಯಲ್ಲಿ ಮೂರು ಬಾರಿ ಭೂಕಂಪದ ಅನುಭವ ಆಗಿದ್ದು, ಜನರು ಆತಂಕಗೊಂಡಿರುವ ಬಗ್ಗೆ ವರದಿಯಾಗಿದೆ.

ಕೊನೆಯ ಭೂಕಂಪ ಮುಂಜಾನೆ 4.25ರ ಸುಮಾರಿಗೆ ಸಂಭವಿಸಿದೆ. 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.

ಇದಕ್ಕೂ ಮುನ್ನ ಮುಂಜಾನೆ 4.22ರ ವೇಳೆಗೆ 3.1 ತೀವ್ರತೆಯ ಭೂಕಂಪ 5 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಅದಕ್ಕೂ ಮೊದಲು 10 ಕಿಲೋಮೀಟರ್ ಆಳದಲ್ಲಿ ನಸುಕಿನ ವೇಳೆ 4.09 ಗಂಟೆಗೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ 4.4 ರಷ್ಟಿತ್ತು ಎನ್ನಲಾಗಿದ್ದು, ಯಾವುದೇ ಹಾನಿ ಅಥವಾ ಸಾವು ನೋವುಗಳ ಬಗ್ಗೆ ವರದಿಗಳು ಬಂದಿಲ್ಲ.

ಜೈಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭೂಕಂಪದ ಅನುಭವ ಆಗಿದೆ. ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂಬ ನಂಬಿಕೆ ನನ್ನದು" ಎಂದು  ವಸುಂದರಾ ರಾಜೇ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚೂನರ್‌ ಕಾರಲ್ಲಿ ಬರುತ್ತಾನೆ ಪೌರಕಾರ್ಮಿಕ: ಸೈಕಲ್​ನಿಂದ ಐಷರಾಮಿ ಕಾರಿನವರೆಗೆ 'ಸೇಸಪ್ಪ'ರ ಯಶೋಗಾಥೆ!

ನಮ್ಮ ಹೋರಾಟ ಉದ್ಯಮಿಗಳ ವಿರುದ್ಧ ಅಲ್ಲ: CM ಡಿಕೆ ಶಿವಕುಮಾರ್ - ಗೌತಮ್ ಅದಾನಿ ಭೇಟಿ ಸಮರ್ಥಿಸಿಕೊಂಡ ಪವನ್‌ ಖೇರಾ

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್