ದೇಶ

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವರುಣನ ಆರ್ಭಣ: ಗುಜರಾತ್ ನಲ್ಲಿ ಜಲಪ್ರಳಯ!

Nagaraja AB

ನವಸಾರಿ: ವರುಣನ ಆರ್ಭಟಕ್ಕೆ ಉತ್ತರ ಭಾರತದ ಹಲವು ಜಿಲ್ಲೆಗಳು ತತ್ತರಿಸಿವೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ನವದೆಹಲಿ, ಗುಜರಾತ್, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

ಅದರಲ್ಲೂ ಗುಜರಾತ್ ನ ನವಸಾರಿ ಹಾಗೂ ಜುನಾಗಢದಲ್ಲಿ ಭಾರೀ ಮಳೆಯಿಂದಾಗಿ  ಅಕ್ಷರಶ: ಜಲ ಪ್ರಳಯವೇ ಸೃಷ್ಟಿಯಾಗಿದ್ದು, ಗ್ಯಾಸ್ ಸಿಲಿಂಡರ್ ಗಳು, ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.  ಭರೂಚ್, ಸೂರತ್, ನವಸಾರಿ, ವಲ್ಸಾದ್, ದಮನ್, ದಾದ್ರಾ ನಗರ್ ಹವೇಲಿ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗಿದ್ದು, ಮುಂಬೈ- ಅಹಮಾದಾಬಾದ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಿಲೋ ಮೀಟರ್ ವರೆಗೂ ವಾಹನಗಳು ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು.

ಮುಂಬೈನಲ್ಲಿ ಕಳೆದ 2-3 ದಿನಗಳಿಂದ ನಿರಂತರ ಮಳೆಯಿಂದಾಗಿ, ಟ್ರಾಫಿಕ್ ಜಾಮ್, ಜಲಾವೃತವಾದ ರಸ್ತೆಗಳು ಮತ್ತು ರೈಲು ಸೇವೆಯಲ್ಲಿ ವಿಳಂಬ ಜನರಿಗೆ ಸಾಮಾನ್ಯ ಸಮಸ್ಯೆಯಾಗಿದೆ. ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು  ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಮತ್ತಷ್ಟು ದಿಗಿಲುಗೊಂಡಿದ್ದಾರೆ. ಮುಂಬೈ, ಥಾಣೆ, ರಾಯಗಡ ಮತ್ತು ರತ್ನಗಿರಿಗೆ ಹವಾಮಾನ ಮುನ್ಸೂಚನಾ ಸಂಸ್ಥೆ ಆರೆಂಜ್ ಅಲರ್ಟ್, ಪಾಲ್ಘರ್ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

 ಭಾರೀ ಮಳೆಯಿಂದಾಗಿ ಸುರಂಗಮಾರ್ಗವನ್ನು ಮುಚ್ಚಿದ ನಂತರ, ಅಂಧೇರಿ ಸುರಂಗಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಮುಂಬೈ ಸಂಚಾರ ಪೊಲೀಸರು ಶನಿವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

SCROLL FOR NEXT