ದೇಶ

ಜಮ್ಮುನಲ್ಲಿ ನಾರ್ಕೊಟಿಕ್ಸ್ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಬಿಎಸ್ಎಫ್: ಪಾಕಿಸ್ತಾನದ ಸ್ಮಗ್ಲರ್ ಹತ್ಯೆ

Sumana Upadhyaya

ಜಮ್ಮು-ಕಾಶ್ಮೀರ: ಗಡಿ ಭದ್ರತಾ ಪಡೆ ಪೊಲೀಸರು(BSF) ಮಾದಕ ವಸ್ತು ಕಳ್ಳಸಾಗಣೆ ಯತ್ನವನ್ನು ನಾಶಪಡಿಸಿ ಪಾಕಿಸ್ತಾನದ ಶಂಕಿತ ಕಳ್ಳ ಸಾಗಣೆದಾರನನ್ನು ಕೊಂದು ಹಾಕಿದ್ದಾರೆ. ಜಮ್ಮುವಿನ ಸಾಂಬಾ ವಲಯದ ರಾಮ್ ಘರ್ ಪ್ರದೇಶದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಗಡಿ ಭದ್ರತಾ ಪಡೆ ಪೊಲೀಸರು ತಿಳಿಸಿದ್ದಾರೆ.

ಬಿಎಸ್ಎಫ್ ಜಮ್ಮು ಪಡೆ ನಾರ್ಕೊ ಕಳ್ಳಸಾಗಣೆ ಯತ್ನವನ್ನು ಪತ್ತೆಹಚ್ಚಿ ನಾಶಪಡಿಸಿ ಪಾಕಿಸ್ತಾನದ ಕಳ್ಳಸಾಗಣೆದಾರನನ್ನು ಕೊಂದು ಹಾಕಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಜುಲೈ 24 ಮತ್ತು 225ರಂದು ಮಧ್ಯರಾತ್ರಿ ಬಿಎಸ್ಎಫ್ ಪಡೆಗಳು ಪಾಕಿಸ್ತಾನದ ಕಳ್ಳಸಾಗಣೆದಾರ ಸಾಂಬಾ ವಲಯದ ರಾಮ್ ಘರ್ ಗಡಿಭಾಗದಲ್ಲಿ ನಾರ್ಕೊಟಿಕ್ಸ್ ಕಳ್ಳಸಾಗಣೆ ಮಾಡುತ್ತಿದ್ದವನನ್ನು ಹಿಡಿದು ಹತ್ಯೆಗೈದಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರದೇಶವನ್ನು ಗಡಿ  ಭದ್ರತಾ ಪಡೆ ಸಿಬ್ಬಂದಿ ಆರಂಭದಲ್ಲಿ ಹುಡುಕಾಟ ನಡೆಸುತ್ತಿದ್ದಾಗ 4 ಶಂಕಿತ ನಾರ್ಕೊಟಿಕ್ಸ್ ಪ್ಯಾಕೆಟ್ ಗಳು ಸುಮಾರು 4 ಕೆ ಜಿ ತೂಕದ್ದು ಸಿಕ್ಕಿದ್ದು ಸ್ಮಗ್ಲರ್ ನನ್ನು ಕೊಂದುಹಾಕಲಾಗಿದೆ ಎಂದು ಬಿಎಸ್ ಎಫ್ ತಿಳಿಸಿದೆ. ಪ್ರದೇಶದಲ್ಲಿ ಹೆಚ್ಚಿನ ಶೋಧಕಾರ್ಯ ನಡೆಯುತ್ತಿದೆ. 

SCROLL FOR NEXT