ದೇಶ

ಮುಸೇವಾಲಾ ಕೊಲೆ ಪ್ರಕರಣ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಾಯಕನನ್ನು ಬಂಧಿಸಿದ ಎನ್‌ಐಎ!

Vishwanath S

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಂದ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಾಯಕ, ಭೂಗತ ಪಾತಕಿ ವಿಕ್ರಮಜಿತ್ ಸಿಂಗ್ ಅಲಿಯಾಸ್ ವಿಕ್ರಮ್ ಬ್ರಾರ್ ಅವರನ್ನು ಕರೆತಂದಿದೆ. 

ಆತನನ್ನು ಭಾರತಕ್ಕೆ ಕರೆತಂದ ಬಳಿಕ ಬಂಧಿಸಲಾಗಿದೆ ಎಂದು ತಿಳಿಸಿದೆ. ರಾಜಸ್ಥಾನದ ಹನುಮಾನ್‌ಗಢ ಮೂಲದ ಬ್ರಾರ್, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹತ್ಯೆಗಳು, ಸುಲಿಗೆ ಮತ್ತು ಮೇ 2022 ರಲ್ಲಿ ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರ ಹತ್ಯೆ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು. ಜುಲೈ 6ರಂದು ಬ್ರಾರ್ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿ ಮಾಡಿತ್ತು.

ಬ್ರಾರ್ ನನ್ನು ಯುಎಇ ಅಧಿಕಾರಿಗಳು ದುಬೈನಲ್ಲಿ ಬಂಧಿಸಿದ್ದರು. ನಂತರ ಎನ್‌ಐಎ ತಂಡವು ಕಾನೂನು ಔಪಚಾರಿಕತೆಯನ್ನು ಅಂತಿಮಗೊಳಿಸಲು ದುಬೈಗೆ ತೆರಳಿತು. ನಂತರ ಆತನನ್ನು ದೆಹಲಿಗೆ ಕರೆತರಲಾಯಿತು. ಬ್ರಾರ್ ಬಂಧನವನ್ನು 'ದೊಡ್ಡ ಗೆಲುವು' ಎಂದು ಎನ್ಐಎ ಬಣ್ಣಿಸಿದೆ.

ಖ್ಯಾತ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಅಲಿಯಾಸ್ ಸಿಧು ಮುಸೇವಾಲಾ ಅವರ ಕೊಲೆ ಸೇರಿದಂತೆ 11 ಪ್ರಕರಣಗಳಲ್ಲಿ ಅವನು ಬೇಕಾಗಿದ್ದಾನೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. 'ಮುಗ್ಧ ಜನರು/ಉದ್ಯಮಿಗಳ ಗುರಿ ಹತ್ಯೆಗಳ ಹೊರತಾಗಿ, ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ (ಕೆನಡಾ ಮೂಲದ) ಮತ್ತು ಇತರರಂತಹ ಭಯಾನಕ ದರೋಡೆಕೋರರ ಸಹಾಯದಿಂದ ಅವನು ಭಾರತದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಬ್ರಾರ್ 2020ರಿಂದ ತಲೆಮರೆಸಿಕೊಂಡಿದ್ದನು. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯ ಪೊಲೀಸರ ಮನವಿಯ ಮೇರೆಗೆ ಆತನ ವಿರುದ್ಧ 11 ಲುಕ್ ಔಟ್ ಸುತ್ತೋಲೆಗಳನ್ನು ಹೊರಡಿಸಲಾಗಿತ್ತು.

SCROLL FOR NEXT