ದೇಶ

ಮಣಿಪುರ ಇಬ್ಬರು ಮಹಿಳೆಯರ ವಿಡಿಯೋ ವೈರಲ್: ಕೇಂದ್ರವನ್ನು 'ಧೃತರಾಷ್ಟ್ರ' ಎಂದು ಕರೆದ ಉದ್ಧವ್ ಠಾಕ್ರೆ

Ramyashree GN

ಥಾಣೆ: ಮೇ 3ರಂದು ಈಶಾನ್ಯ ರಾಜ್ಯದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಥಾಣೆ ನಗರದಲ್ಲಿ ಉತ್ತರ ಭಾರತೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ಅಧಿಕಾರದಲ್ಲಿರುವವರು ಮಹಿಳೆಯರನ್ನು ಅವಮಾನಿಸಿದಾಗ, ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗುವ ಮೂಲಕ  ಮಹಾಭಾರತದ 'ಧೃತರಾಷ್ಟ್ರ' ಆಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಹಿಂಸಾಚಾರ ಪ್ರಾರಂಭವಾದಾಗಿನಿಂದ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದು ವರದಿಯಾಗಿದ್ದು, ಅವರು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು.

'ನಿಮಗೆ ನಾಚಿಕೆಯಾಗಬೇಕು'. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಮಹಿಳೆ ಮತ್ತು ಬುಡಕಟ್ಟು ಜನಾಂಗದವರು. ನಾನು ರಾಷ್ಟ್ರಪತಿಗಳನ್ನು ಕೇಳಲು ಬಯಸುತ್ತೇನೆ, ನೀವು ಏನು ಮಾಡುತ್ತಿದ್ದೀರಿ? ನಿಮಗೆ ಯಾವುದೇ ಸಂವೇದನಾಶೀಲತೆ ಇಲ್ಲವೇ?. ಮಣಿಪುರದ ಗವರ್ನರ್ ಅನುಸೂಯಾ ಉಯಿಕೆ) ಸಹ ಮಹಿಳೆ ಮತ್ತು ಅವರು ಏನು ಮಾಡುತ್ತಿದ್ದಾರೆ?' ಎಂದು ಠಾಕ್ರೆ ಪ್ರಶ್ನಿಸಿದರು.

SCROLL FOR NEXT