ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೈಸೂರು: ಇಂದಿನಿಂದ ಆಗಸ್ಟ್ 2 ರವರೆಗೆ ಥಿಂಕ್ 20 ಶೃಂಗಸಭೆ

ಮೈಸೂರಿನಲ್ಲಿ ಇಂದಿನಿಂದ ಆ.2 ವರೆಗೆ ಥಿಂಕ್ 20 ಶೃಂಗಸಭೆ ಆರಂಭವಾಗಿದ್ದು, 43 ರಾಷ್ಟ್ರಗಳ ಜಿ20 ಸದಸ್ಯರು ಭಾಗಿಯಾಗಲಿದ್ದಾರೆ.

ಮೈಸೂರು ಅರಮನೆ
Srinivas Rao BV
Updated On : 1 Aug 2023, 6:46 pm

ಮೈಸೂರು: ಮೈಸೂರಿನಲ್ಲಿ ಇಂದಿನಿಂದ ಆ.2 ವರೆಗೆ ಥಿಂಕ್ 20 ಶೃಂಗಸಭೆ ಆರಂಭವಾಗಿದ್ದು, 43 ರಾಷ್ಟ್ರಗಳ ಜಿ20 ಸದಸ್ಯರು ಭಾಗಿಯಾಗಲಿದ್ದಾರೆ. 

ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ, ಸ್ಥೂಲ ಅರ್ಥಶಾಸ್ತ್ರ ಮತ್ತು ವ್ಯಾಪಾರ, ಮಹಿಳಾ ನೇತೃತ್ವದ ಅಭಿವೃದ್ಧಿ, ಡಿಜಿಟಲ್ ರೂಪಾಂತರ, ಹಸಿರು ಪರಿವರ್ತನೆ, ಜಾಗತಿಕ ಆರ್ಥಿಕ ಕ್ರಮ, ವೇಗವರ್ಧನೆಗಾಗಿ ಜೀವನಶೈಲಿ ಸೇರಿದಂತೆ ಹಲವು ವಿಷಯಗಳು ಥಿಂಕ್ 20 ಶೃಂಗಸಭೆಯಲ್ಲಿ ಚರ್ಚೆಯಾಗಲಿವೆ. 

ಶೃಂಗಸಭೆ ವೇಳೆ ವಿದೇಶಿ ಗಣ್ಯರು ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement