ದೇಶ

36 ವರ್ಷಗಳಲ್ಲೇ ಅತ್ಯಂತ ತಂಪಾದ 'ಮೇ' ಆನಂದಿಸಿದ ದೆಹಲಿ!

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು ಕಡಿಮೆ ತಾಪಮಾನ ದಾಖಲಾಗಿದ್ದು, 36 ವರ್ಷಗಳಲ್ಲೇ ಅತ್ಯಂತ ತಂಪಾದ ಮೇ ತಿಂಗಳಾಗಿದೆ. ಅಧಿಕ ಮಳೆಯು ಈ ಬಾರಿ ಸರಾಸರಿ ಗರಿಷ್ಠ ತಾಪಮಾನವನ್ನು 36.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

"ಇದು ಹವಾಮಾನ ಬದಲಾವಣೆಯ ಪರಿಣಾಮ. ಈ ರೀತಿಯ ಹವಾಮಾನವನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಈಗ ನಾವು ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆಯಾಗುತ್ತದೆ ಎಂದು ಯೋಚಿಸುತ್ತಿದ್ದೇವೆ" ಎಂದು ಸ್ಥಳೀಯರಾದ ಭೂಷಣ್ ನರುಲಾ ಅವರು ಹೇಳಿದ್ದಾರೆ.

ಮಂಗಳವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ರಾಷ್ಟ್ರ ರಾಜಧಾನಿಯನ್ನು ತಂಪಾಗಿಸಿದೆ. ಮಳೆ ವಾಹನ ಸಂಚಾರದ ಮೇಲೆ ಪರಿಣಾಮ ಬೀರಿತು ಮತ್ತು ಅನೇಕ ವಿಮಾನಗಳ ಮಾರ್ಗವನ್ನು ಬದಲಾಯಿಸಿತು.

"ನನ್ನ ಜೀವನದಲ್ಲಿ ನಾನು ಮೇ ತಿಂಗಳಲ್ಲಿ ಈ ರೀತಿಯ ಹವಾಮಾನವನ್ನು ನೋಡಿಲ್ಲ. ನಾನು ಇದನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ಇದು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಂಭವಿಸುತ್ತಿದೆ ಎಂದು ಸ್ಥಳೀಯರಾದ ಬಲ್ಜಿತ್ ಸಿಂಗ್ ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನದಿಂದ ಈ ಎಲ್ಲ ಬದಲಾವಣೆಗಳು ಆಗುತ್ತಿವೆ. ಜನರು ಮರಗಳನ್ನು ಕಡಿಯುತ್ತಿದ್ದಾರೆ, ಮಾಲಿನ್ಯ ಹೆಚ್ಚಿದೆ, ಇದರ ಪರಿಣಾಮವೇ ಈ ಎಲ್ಲ ಬದಲಾವಣೆ' ಎಂದು ಮತ್ತೊಬ್ಬ ಸ್ಥಳೀಯರಾದ ಚಾರುಲತಾ ಹೇಳಿದ್ದಾರೆ.
 

SCROLL FOR NEXT