ದೇಶ

ರೈಲು ಅಪಘಾತ ಪ್ರಕರಣ: ಮೊದಲು ಸಿಗ್ನಲ್ ನೀಡಿ ಆ ಬಳಿಕ ತೆಗೆಯಲಾಗಿತ್ತು: ಪ್ರಾಥಮಿಕ ವರದಿ 

Srinivas Rao BV

ನವದೆಹಲಿ: 288 ಕ್ಕೂ ಹೆಚ್ಚು ಮಂದಿಯ ಸಾವು, 1,100 ಮಂದಿ ಗಾಯಗೊಂಡಿರುವ ಒಡಿಶಾ ರೈಲು ಅಪಘಾತ ಪ್ರಕರಣಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದ್ದು ಪ್ರಾಥಮಿಕ ವರದಿಗಳು ಬಹಿರಂಗವಾಗಿದೆ. 

ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ

ಪ್ರಾಥಮಿಕ ತನಿಖೆಗಳ ಪ್ರಕಾರ, ಕೋರಮಂಡಲ್ ಎಕ್ಸ್ ಪ್ರೆಸ್ ಗೆ ಮುಖ್ಯ ಮಾರ್ಗವನ್ನು ಪ್ರವೇಶಿಸಲು ಸಿಗ್ನಲ್ ನೀಡಲಾಯಿತು ಆದರೆ ಆ ಬಳಿಕ ಅದನ್ನು ತೆಗೆದುಹಾಕಲಾಯಿತು ಮತ್ತು ರೈಲು ಲೂಪ್ ಲೈನ್‌ಗೆ ಪ್ರವೇಶಿಸಿ, ಅಲ್ಲಿ ಅದು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವೇಗವಾಗಿ ಬರುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಪಕ್ಕದ ಹಳಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಯ ಮೂಲಕ ತಿಳಿದುಬಂದಿದೆ.

SCROLL FOR NEXT