ದೇಶ

ಒಡಿಶಾ ರೈಲು ಅಪಘಾತ: ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ

Nagaraja AB

ಬಾಲಾಸೋರ್: ಒಡಿಶಾದ ಬಾಲಾಸೋರ್ ಬಳಿ ಅಪಘಾತಕ್ಕೀಡಾದ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಟಿಕೆಟ್ ರಹಿತ ಪ್ರಯಾಣಿಕರು ಸಹ ಪರಿಹಾರ ಪಡೆಯುತ್ತಾರೆ ಎಂದು ರೈಲ್ವೆ ಭಾನುವಾರ ತಿಳಿಸಿದೆ.

ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಕೆಟ್ ರಹಿತ ಅಥವಾ ಇಲ್ಲದಿದ್ದ ಪ್ರಯಾಣಿಕರಿಗೂ ಕೂಡಾ ಪರಿಹಾರ ಪಡೆಯುತ್ತಾರೆ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ, ಆಸ್ಪತ್ರೆಗಳಲ್ಲಿ ದಾಖಲಾಗಿರುವ ಪ್ರತಿಯೊಬ್ಬ ರೋಗಿಯು ತನ್ನ ಸಂಬಂಧಿಕರ ಪತ್ತೆಗೆ ನೆರವಾಗಲು  ಸ್ಕೌಟ್ ಅಥವಾ ಮಾರ್ಗದರ್ಶಿ ಹೊಂದಿರುತ್ತಾರೆ. ಸಹಾಯವಾಣಿ ಸಂಖ್ಯೆ 139 ಲಭ್ಯವಿದ್ದು, ಹಿರಿಯ ರೈಲ್ವೆ ಅಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿದ್ದಾರೆ ಮತ್ತು ಸಾಧ್ಯವಾದಷ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರ್ಮಾ ಹೇಳಿದರು.

"ಗಾಯಗೊಂಡವರು ಅಥವಾ ಮೃತರ ಕುಟುಂಬ ಸದಸ್ಯರು  ಕರೆ ಮಾಡಬಹುದು ಮತ್ತು  ಅವರನ್ನು ಭೇಟಿ ಮಾಡಲು ಸಾಧ್ಯವಾಗುವಂತೆ ಖಚಿತಪಡಿಸಿಕೊಳ್ಳುತ್ತೇವೆ.ಅವರ ಪ್ರಯಾಣ ಮತ್ತು ಇತರ ವೆಚ್ಚಗಳನ್ನು  ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಸಹಾಯವಾಣಿ ಸೇವೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಮತ್ತು ರೈಲ್ವೆ ಸಚಿವರು ಘೋಷಿಸಿರುವ ಸಾವನ್ನಪ್ಪಿರುವವರಿಗೆ 10 ಲಕ್ಷ ರೂ. ಗಂಭೀರ ಗಾಯಾಳುಗಳಿಗೆ 2 ಲಕ್ಷ ರೂಯ ಹಾಗೂ ಸಣ್ಣಪುಟ್ಟ ಗಾಯವಾದವರಿಗೆ 50,000 ರೂ.  ಪರಿಹಾರವನ್ನು ತ್ವರಿತವಾಗಿ ವಿತರಿಸಲಾಗುವುದು ಎಂದು ರೈಲ್ವೆ ಹೇಳಿದೆ. 

ಇಲ್ಲಿಯವರೆಗೆ, 285 ಪ್ರಕರಣಗಳಲ್ಲಿ 11 ಸಾವುಗಳು, 50 ಗಂಭೀರ ಗಾಯಗಳು ಮತ್ತು 224 ಸಣ್ಣ ಪುಟ್ಟ ಗಾಯಾಳುಗಳಿಗೆ 3.22 ಕೋಟಿ ರೂ.ಗಳನ್ನು  ಪರಿಹಾರ ರೂಪದಲ್ಲಿ ರೈಲ್ವೆ ವಿತರಿಸಿದ್ದು, ಸೋರೋ, ಖರಗ್‌ಪುರ, ಬಾಲಸೋರ್, ಖಾಂತಪಾರಾ, ಭದ್ರಕ್, ಕಟಕ್ ಮತ್ತು ಭುವನೇಶ್ವರದಲ್ಲಿ ಪರಿಹಾರ ಮೊತ್ತವನ್ನು ಭಾರತೀಯ ರೈಲ್ವೆ ಪಾವತಿಸುತ್ತಿದೆ. ಸುಮಾರು 200 ಸಂತ್ರಸ್ತರಿದ್ದು, ಅವರನ್ನು ಇನ್ನೂ ಗುರುತಿಸಬೇಕಾಗಿದೆ.ಆಗ್ನೇಯ ರೈಲ್ವೆಯು ಗುರುತಿನ ಉದ್ದೇಶಕ್ಕಾಗಿ ಅವರ ಛಾಯಾಚಿತ್ರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ. 

SCROLL FOR NEXT