ದೇಶ

ಪ್ರತಿಪಕ್ಷಗಳ ಸಭೆಯಲ್ಲಿ ಆಯಾ ಪಕ್ಷದ ಮುಖ್ಯಸ್ಥರು ಮಾತ್ರ ಭಾಗವಹಿಸಬೇಕು: ನಿತೀಶ್ ಕುಮಾರ್

Lingaraj Badiger

ಪಾಟ್ನಾ: ಜೂನ್ 12 ರಂದು ನಿಗದಿಯಾಗಿ, ಈಗ ಮುಂದೂಡಿಕೆಯಾಗಿರುವ ಪ್ರತಿಪಕ್ಷಗಳ ಸಭೆಗೆ ಆಯಾ ಪಕ್ಷಗಳ ಮುಖ್ಯಸ್ಥರು ಮಾತ್ರ ಹಾಜರಾಗಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಮನವಿ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ವರಿಷ್ಠ, ಬಹುಚರ್ಚಿತ ಸಭೆಯ ಹೊಸ ದಿನಾಂಕದ ಬಗ್ಗೆ ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿದ ನಂತರ ಪ್ರಕಟಿಸಲಾಗುವುದು ಎಂದು ಹೇಳಿದರು.

"ಜೂನ್ 12 ರಂದು ಕಾಂಗ್ರೆಸ್ ಹಾಗೂ ಇನ್ನೊಂದು ಪಕ್ಷ ಈ ದಿನಾಂಕ ತಮಗೆ ಅನಾನುಕೂಲವಾಗಿದೆ ಎಂದು ನನಗೆ ತಿಳಿಸಿದ ನಂತರ ನಾವು ಸಭೆಯನ್ನು ಮುಂದೂಡಬೇಕಾಯಿತು. ಆದ್ದರಿಂದ ಜೂನ್ 12ರ ಸಭೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಮತ್ತು ಇತರ ಪಕ್ಷಗಳೊಂದಿಗೆ ಸಮಾಲೋಚಿಸಿದ ನಂತರ ಹೊಸ ದಿನಾಂಕ ಪ್ರಕಟಿಸಲಾಗುವುದು ಎಂದರು. ಆದರೆ ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದೇನೆ, ಸಭೆಗೆ ಹಾಜರಾಗಲು ಒಪ್ಪುವ ಎಲ್ಲಾ ಪಕ್ಷಗಳು ಆಯಾ ಮುಖ್ಯಸ್ಥರು ಭಾಗವಹಿಸಬೇಕು" ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.

"ಉದಾಹರಣೆಗೆ, ಕಾಂಗ್ರೆಸ್ ತನ್ನ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆಯವರನ್ನು ಸಭೆ ಕಳುಹಿಸಬಹುದು ಎಂಬ ಅನಿಸಿಕೆ ಇತ್ತು. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಕಳೆದ ವಾರ, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಅವರು, ತಮ್ಮ ಪಕ್ಷ ಒಬ್ಬ ಮುಖ್ಯಮಂತ್ರಿ ಮತ್ತು ಇನ್ನೊಬ್ಬ ಹಿರಿಯ ನಾಯಕರನ್ನು ಪ್ರತಿಪಕ್ಷಗಳ ಸಭೆಗೆ ಕಳುಹಿಸಲು ಯೋಜಿಸುತ್ತಿದೆ ಎಂದು ಹೇಳಿದ್ದರು.

SCROLL FOR NEXT