ಟ್ರಕ್ ಪಲ್ಟಿಯಿಂದ ಕೆಳಗೆ ಬಿದ್ದಿರುವ ಬಿಯರ್ ಬಾಟಲಿಗಳು 
ದೇಶ

ಆಂಧ್ರ ಪ್ರದೇಶದಲ್ಲಿ ಟ್ರಕ್ ಪಲ್ಟಿ; ಕೆಳಗೆ ಬಿದ್ದ ಬಿಯರ್ ಬಾಟಲಿಗಳನ್ನು ಕದ್ದೊಯ್ದ ಜನರು

ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಮದ್ಯದ ಬಾಟಲಿಗಳಿದ್ದ ಕೇಸ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಜನರು ಬಿಯರ್ ಬಾಟಲಿಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಅನಕಾಪಲ್ಲಿ ಮತ್ತು ಬಯ್ಯವರಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ.

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಮದ್ಯದ ಬಾಟಲಿಗಳಿದ್ದ ಕೇಸ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಜನರು ಬಿಯರ್ ಬಾಟಲಿಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

ಅನಕಾಪಲ್ಲಿ ಮತ್ತು ಬಯ್ಯವರಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ.

ಟ್ರಕ್ ಪಲ್ಟಿಯಾದ ಬಳಿಕ 200 ಬಿಯರ್ ಬಾಟಲಿಗಳ ಸಂಪೂರ್ಣ ಲೋಡ್ ನೆಲದ ಮೇಲೆ ಬಿದ್ದಿದ್ದರಿಂದ, ಸ್ಥಳೀಯರು ಲಾರಿ ಚಾಲಕ ಮತ್ತು ಕ್ಲೀನರ್‌ಗೆ ಸಹಾಯ ಮಾಡುವ ಬದಲು ಅವುಗಳನ್ನು ಕದಿಯುವಲ್ಲಿ ನಿರತರಾಗಿದ್ದರು. ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮದ್ಯ ಸಾಗಿಸುವ ಟ್ರಕ್‌ಗಳು ರಸ್ತೆ ಅಪಘಾತಕ್ಕೀಡಾದ ಬಳಿಕ ಅದರಲ್ಲಿದ್ದ ಮದ್ಯದ ಬಾಟಲಿಗಳನ್ನು ಕದಿಯುವ ಇಂತಹ ಘಟನೆಗಳು ರಾಜ್ಯದಲ್ಲಿ ಈ ಹಿಂದೆಯೂ ವರದಿಯಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ಸಮರ್ಥಿಸಿಕೊಂಡ CM; ಡಿಕೆಶಿ ಹೇಳಿದ್ದೇನು?

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ! ಸಿಗದ ಜನಬೆಂಬಲ, ಬಹುತೇಕ ಕಡೆ ಸಹಜ ಜನಜೀವನ

AIನಿಂದ ಕೆಲಸ ಕಳೆದುಕೊಳ್ಳುವ ಆತಂಕದ ನಡುವೆ ಮಾರ್ಕ್ ಜುಕರ್ ಬರ್ಗ್ ಹೊಸ ಭವಿಷ್ಯವಾಣಿ! ಏನಿದು?

‘ಅಂಕಲ್, ಪವರ್ ಆಫ್ ಮಾಡಿ’: ಮಹಿಳಾ ಸಿಬ್ಬಂದಿ ಜೀವ ಉಳಿಸಿದ 5ನೇ ತರಗತಿ ಬಾಲಕನ ಸಮಯಪ್ರಜ್ಞೆ! video