ಜೈಲು ಶಿಕ್ಷೆ (ಸಾಂಕೇತಿಕ ಚಿತ್ರ) 
ದೇಶ

ದಲಿತ ವಿದ್ಯಾರ್ಥಿಗೆ ಮೂತ್ರ ಕುಡಿಸಲು ಯತ್ನ; ಸುಳ್ಳು ಕೇಸ್ ದಾಖಲು!

ಕಾನೂನು ವ್ಯಾಸಂಗ ಮಾಡುತ್ತಿರುವ 22 ವರ್ಷದ ಉತ್ತರ ಪ್ರದೇಶ ಮೂಲದ ದಲಿತ ವಿದ್ಯಾರ್ಥಿಗೆ ಮೂತ್ರ ಕುಡಿಸಲು ಯತ್ನಿಸಲಾಗಿದ್ದು, ಆತನನ್ನು ಗ್ರೇಟರ್ ನೋಯ್ಡಾದ ಪೊಲೀಸರು ಥಳಿಸಿ ಸುಳ್ಳು ಕೇಸ್ ದಾಖಲಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ಕಾನೂನು ವ್ಯಾಸಂಗ ಮಾಡುತ್ತಿರುವ 22 ವರ್ಷದ ಉತ್ತರ ಪ್ರದೇಶ ಮೂಲದ ದಲಿತ ವಿದ್ಯಾರ್ಥಿಗೆ ಮೂತ್ರ ಕುಡಿಸಲು ಯತ್ನಿಸಲಾಗಿದ್ದು, ಆತನನ್ನು ಗ್ರೇಟರ್ ನೋಯ್ಡಾದ ಪೊಲೀಸರು ಥಳಿಸಿ ಸುಳ್ಳು ಕೇಸ್ ದಾಖಲಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
 
ದ್ವಿತೀಯ ವರ್ಷದ ಬಿಎ ಎಲ್ಎಲ್ ಬಿ ವಿದ್ಯಾರ್ಥಿಯಾಗಿರುವ ಈ ವಿದ್ಯಾರ್ಥಿಗೆ ಪೊಲೀಸರೇ ಮೂತ್ರ ಕುಡಿಸಲು ಯತ್ನಿಸಿರುವುದು ಮತ್ತೊಂದು ಹೇಯ ಕೃತ್ಯವಾಗಿದೆ. ಈ ಘಟನೆ ಗೌತಮ್ ಬುದ್ಧ ನಗರ ಜಿಲ್ಲೊಯ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ವರದಿಯಾಗಿದೆ.
 
ಪೊಲೀಸರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಯೂ ಆಗಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಗ್ರೇಟರ್ ನೊಯ್ಡಾ) ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಗೌತಮ್ ಬುದ್ಧ ನಗರ ಪೊಲೀಸರಿಗೆ ಈ ವಿದ್ಯಾರ್ಥಿ ಆ ಪ್ರದೇಶದಲ್ಲಿ ಸ್ಪಾ ಹಾಗೂ ಮಸಾಜ್ ಕೇಂದ್ರದ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಯುತ್ತಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಈ ಸ್ಪಾ ಹಾಗೂ ಮಸಾಜ್ ಕೇಂದ್ರದ ಮಾಲಕಿಯನ್ನು ಬಂಧಿಸಿದ್ದರು. ಇದು 2021 ರಲ್ಲಿ ನಡೆದ ಘಟನೆಯಾಗಿದ್ದು, ನನ್ನ ಸ್ನೇಹಿತರೇ ಆಗಿದ್ದ ಮಹಿಳೆ ಮತ್ತು ಆಕೆಯ ಪತಿ ನನ್ನ ವಿರುದ್ಧ ಸುಲಿಗೆಯ ಸುಳ್ಳು ಆರೋಪ ಹೊರಿಸಿದ್ದರು ಪೊಲೀಸರು ಕಳೆದ ವರ್ಷ  ನನ್ನನ್ನು ಬಂಧಿಸಿ ರಕ್ತ ಬರುವಂತೆ ಥಳಿಸಿದ್ದರು. ಅಷ್ಟೇ ಅಲ್ಲದೇ ಕುಡಿಯಲು ನೀರು ಕೇಳಿದಾಗ ಮೂತ್ರವನ್ನು ನೀಡಿ ಕುಡಿಸಲು ಯತ್ನಿಸಿದ್ದರು ಎಂದು ಯುವಕ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾನೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!