ಅಖಿಲೇಶ್ ಯಾದವ್ 
ದೇಶ

ಸಮಾಜವಾದಿ ಪಕ್ಷ 'ಮೃದು ಹಿಂದುತ್ವ' ಧೋರಣೆ ಅನುಸರಿಸುತ್ತಿದ್ದು, ಕಠಿಣ ನಿಲುವು ತೆಗೆದುಕೊಳ್ಳಬೇಕಾಗಿದೆ: ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷ 'ಮೃದು ಹಿಂದುತ್ವ' ಧೋರಣೆಯನ್ನು ಅನುಸರಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಯಾಗಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷವು 'ತುಂಬಾ ಮೃದು'ವಾಗಿದೆ. ಆದರೆ ಇದೀ ಕಠಿಣ ನಿಲುವು ತೆಗೆದುಕೊಳ್ಳಬೇಕಾಗಿದೆ ಎಂದು ಶನಿವಾರ ಹೇಳಿದರು.

ಸೀತಾಪುರ: ಸಮಾಜವಾದಿ ಪಕ್ಷ 'ಮೃದು ಹಿಂದುತ್ವ' ಧೋರಣೆಯನ್ನು ಅನುಸರಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಯಾಗಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷವು 'ತುಂಬಾ ಮೃದು'ವಾಗಿದೆ. ಆದರೆ ಇದೀ ಕಠಿಣ ನಿಲುವು ತೆಗೆದುಕೊಳ್ಳಬೇಕಾಗಿದೆ ಎಂದು ಶನಿವಾರ ಹೇಳಿದರು.

'ಭಾರತೀಯ ಜನತಾ ಪಕ್ಷವು (ಬಿಜೆಪಿ) ಒಂದು ಪದವನ್ನು ಹುಟ್ಟುಹಾಕಿದೆ. ಅವರು ಹೇಳುತ್ತಿದ್ದಾರೆ ನಾವೂ ಮೃದು ಹಿಂದುತ್ವದ ಹಾದಿಯಲ್ಲಿ ಹೋಗುತ್ತಿರುವಂತೆ ಹೇಳುತ್ತಿದ್ದಾರೆ. ಆದರೆ ಗಾಬರಿಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಸೀತಾಪುರ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳವಾದ ನೈಮಿಶಾರಣ್ಯದಲ್ಲಿ ಸಮಾಜವಾದಿ ಪಕ್ಷದ ಎರಡು ದಿನಗಳ ತರಬೇತಿ ಶಿಬಿರವನ್ನು ಮುಕ್ತಾಯಗೊಳಿಸುವಾಗ, ಅಖಿಲೇಶ್ ಯಾದವ್ 'ಮೃದು ಹಿಂದುತ್ವ'ಕ್ಕಾಗಿ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ.

ಇತ್ತೀಚೆಗೆ ಬಿಜೆಪಿಯ 'ಟಿಫಿನ್ ಪೇ ಚರ್ಚಾ' ಕಾರ್ಯಕ್ರಮದಲ್ಲಿ ವ್ಯಂಗ್ಯವಾಡಿದ ಕುರಿತಂತೆ ಎಸ್‌ಪಿ ಮುಖ್ಯಸ್ಥರು, 'ನಾವು ಮತ್ತು ನೀವು ಇಲ್ಲಿ 48 ಡಿಗ್ರಿ ಸೆಲ್ಸಿಯಸ್‌ನ ಶಾಖದಲ್ಲಿ ಕುಳಿತಿದ್ದೇವೆ. ಆದರೆ ಬಿಜೆಪಿಗರು ಮೃದು ಹಿಂದುತ್ವ ಎಂಬ ಆರೋಪ ಮಾಡುತ್ತಿದ್ದಾರೆ ಎಂದರು.

ಶುಕ್ರವಾರ ಇಲ್ಲಿ ಎರಡು ದಿನಗಳ ಕಾರ್ಯಕರ್ತರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್, ನೈಮಿಷಾರಣ್ಯದಿಂದ ಅಸುರರ ವಿನಾಶ ಪ್ರಾರಂಭವಾಯಿತು ಎಂದು ಹೇಳಿದ್ದರು.

ಎರಡು ದಿನಗಳಲ್ಲಿ ರಾಮ್ ಗೋಪಾಲ್ ಯಾದವ್, ಶಿವಪಾಲ್ ಯಾದವ್, ನರೇಶ್ ಉತ್ತಮ್, ರಾಮಾಚಲ ರಾಜ್‌ಭರ್ ಮತ್ತು ಪಕ್ಷದ ಇತರ ಪ್ರಮುಖರಿಂದ ಸುಮಾರು 5,000 ಪಕ್ಷದ ಕಾರ್ಯಕರ್ತರು ತರಬೇತಿ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Waqf Amendment Act: ಕೆಲವೊಂದು ಅಂಶಗಳಿಗೆ ತಡೆ ನೀಡಿ ಸುಪ್ರೀಂ ಕೋರ್ಟ್ 'ಮಧ್ಯಂತರ ಆದೇಶ' ಪ್ರಕಟ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: PIL ವಜಾಗೊಳಿಸಿದ ಹೈಕೋರ್ಟ್; ಪ್ರತಾಪ್ ಸಿಂಹಗೆ ಭಾರಿ ಹಿನ್ನಡೆ!

ಭಾರತ vs ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜಾಟ; ಹ್ಯಾಂಡ್‌ಶೇಕ್ ನಿರಾಕರಣೆ ಒಂದು ಪ್ರಹಸನ; ಸಂಜಯ್ ರಾವುತ್

ಬೆಂಗಳೂರು: ವೇಶ್ಯಾವಾಟಿಕೆಗೆ ತಳ್ಳಲು ಮಹಿಳೆಯರ ಅನೈತಿಕ ಸಾಗಣೆಯಲ್ಲಿ ಗಣನೀಯ ಏರಿಕೆ!

Asia Cup 2025: ಭಾರತ vs ಪಾಕಿಸ್ತಾನ ಪಂದ್ಯ ಮತ್ತೆ ಯಾವಾಗ? ಇಲ್ಲಿದೆ ಲೆಕ್ಕಾಚಾರ...

SCROLL FOR NEXT