ಸೇನಾಪಡೆ ವಶಪಡಿಸಿಕೊಂಡಿರುವ ನಿಗೂಢ ಬಲೂನ್. 
ದೇಶ

ಜಮ್ಮು-ಕಾಶ್ಮೀರ: ಕಥುವಾ ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ, ಕಾರ್ಯಾಚರಣೆಗಿಳಿದ ಸೇನಾಪಡೆ

ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಶ್ರೀನಗರ: ಪಾಕಿಸ್ತಾನದ ಅಂತರಾಷ್ಟ್ರೀಯ ಏರ್‌ಲೈನ್ಸ್ ಲಾಂಛನ ಇರುವ ವಿಮಾನದ ಆಕಾರದ ಅನುಮಾನಾಸ್ಪದ ಬಲೂನ್ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿದೆ.

ಕಪ್ಪು ಬಿಳುಪು ಬಣ್ಣದ ನಿಗೂಢ ಬಲೂನ್ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಭದ್ರತಾ ಪಡೆಗಳು ಅದನ್ನು ವಶಪಡಿಸಿಕೊಂಡಿವೆ.

ಬಲೂನ್ ಎಲ್ಲಿಂದ ಬಂದಿದೆ ಎಂದು ತನಿಖೆ ಮಾಡಲು ಪ್ರದೇಶದಲ್ಲಿ ಸೇನೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಇದೇ ರೀತಿಯ ವಿಮಾನದ ಆಕಾರದ ಹಸಿರು ಮತ್ತು ಬಿಳಿ ಬಲೂನ್ ಶಿಮ್ಲಾದಲ್ಲಿ ಪತ್ತೆಯಾಗಿತ್ತು. ಅದರ ಮೇಲೆ ಸಹ ಪಿಐಎ ಲೋಗೋವನ್ನು ಮುದ್ರಿಸಲಾಗಿತ್ತು.

ಮೇ 20 ರಂದು ಅಮೃತಸರದಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದ ಪಾಕಿಸ್ತಾನದ ಡ್ರೋಣ್'ನ್ನು ಸೇನೆ ಹೊಡೆದುರುಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ, ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು, ಮೆಟ್ರೋ ಸಂಚಾರ ವ್ಯತ್ಯಯ!

ಮೂಲಭೂತವಾದಿಗಳ ಒತ್ತಡಕ್ಕೆ ಮಣಿದ ಪಾಕ್ ಸರ್ಕಾರ; ಹಿಂದೂ ಹೆಸರುಗಳ ಮರು ನಾಮಕರಣ ಮುಂದೂಡಿಕೆ!

ಫೈನಲ್ ಫೈಟ್: ಸಿದ್ದರಾಮಯ್ಯ ಮನವೊಲಿಕೆಗೆ ರಾಹುಲ್ ಗಾಂಧಿ ಯತ್ನ; ಯತೀಂದ್ರಗೆ DCM ಸ್ಥಾನ, ರಾಜ್ಯಸಭೆ ಆಫರ್?

SCROLL FOR NEXT