ದೇಶ

ಆಫ್ರಿಕಾದಲ್ಲಿ 9 ತಿಂಗಳ ಸೆರೆವಾಸದ ಬಳಿಕ ಭಾರತಕ್ಕೆ ಮರಳಿದ 19 ಭಾರತೀಯರು

Nagaraja AB

ನವದೆಹಲಿ: ಆಫ್ರಿಕಾದ ಈಕ್ವಟೋರಿಯಲ್,  ಗಿನಿಯಾ ಮತ್ತು ನೈಜೀರಿಯಾದಲ್ಲಿ ಒಂಬತ್ತು ತಿಂಗಳಿನಿಂದ ಸೆರೆವಾಸ ಅನುಭವಿಸಿದ ನಂತರ ಭಾರತೀಯ ಸರಕು ಸಾಗಣೆ ಹಡಗಿನ ಹದಿನಾರು ಸಿಬ್ಬಂದಿ ತಮ್ಮ ಸ್ವದೇಶಕ್ಕೆ ಮರಳಿದ್ದಾರೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.

ತೈಲ ಟ್ಯಾಂಕರ್ ಎಂಟಿ ಹೀರೋಯಿಕ್ ಇಡೂನ್ ಮತ್ತು ಅದರ  16 ಭಾರತೀಯರು ಸೇರಿದಂತೆ 26 ಸಿಬ್ಬಂದಿ ಕಳೆದ ವರ್ಷ ಆಗಸ್ಟ್‌ನಿಂದ ಬಂಧನದಲ್ಲಿದ್ದರು. ಅವರನ್ನು ಮೊದಲಿಗೆ ಈಕ್ವಟೋರಿಯಲ್ ಗಿನಿಯಾದಲ್ಲಿ ಮತ್ತು ನಂತರ ನೈಜೀರಿಯಾದಲ್ಲಿ ಬಂಧಿಸಲಾಗಿತ್ತು. ಹಡಗು ಮತ್ತು ಸಿಬ್ಬಂದಿ ಮೇಲೆ  ತೈಲ ಕಳ್ಳತನ ಸೇರಿದಂತೆ ವಿವಿಧ ಅಪರಾಧಗಳ ಆರೋಪ ಹೊರಿಸಲಾಗಿತ್ತು.

ಸುದೀರ್ಘ ಮಾತುಕತೆಗಳ ನಂತರ, ಸಿಬ್ಬಂದಿ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಲಾಗಿದೆ ಮತ್ತು ದಂಡ ಪಾವತಿಸಿದ ನಂತರ ಮೇ 27 ರಂದು ಹಡಗನ್ನು ಬಿಡುಗಡೆ ಮಾಡಲಾಯಿತು.ಈಗ ಭಾರತೀಯ ಸಿಬ್ಬಂದಿಗಳು ಭಾರತಕ್ಕೆ ಮರಳಿದ್ದಾರೆ" ಎಂದು ಮೂಲವೊಂದು ತಿಳಿಸಿದೆ.

ಭಾರತೀಯ ಮಿಷನ್ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದರು ಮತ್ತು ಆಗಾಗ್ಗೆ ಕಾನ್ಸುಲರ್ ಕಚೇರಿ ಸಂಪರ್ಕಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
 

SCROLL FOR NEXT