ದೇಶ

ಜಮ್ಮು-ಕಾಶ್ಮೀರದಲ್ಲಿ ಭೂಕಂಪ, 4.4 ತೀವ್ರತೆ ದಾಖಲು

Srinivas Rao BV

ಶ್ರೀನಗರ: ಕಡಿಮೆ ತೀವ್ರತೆಯ ಎರಡು ಭೂಕಂಪ ಜಮ್ಮು-ಕಾಶ್ಮೀರದ ರಾಮ್ಬನ್ ಹಾಗೂ ದೋಡಾ ಜಿಲ್ಲೆಗಳಲ್ಲಿ ವರದಿಯಾಗಿದೆ. ಇತ್ತೀಚಿನ ವರದಿಯ ಪ್ರಕಾರ ಯಾವುದೇ ಜೀವ ಹಾನಿ ಉಂಟಾಗಿಲ್ಲ.  ರಿಕ್ಟಾರ್ ಮಾಪಕದಲ್ಲಿ 3.0 ಹಾಗೂ 4.4 ತೀವ್ರತೆ ದಾಖಲಾಗಿದೆ.  ಚೆನಾಬ್ ಕಣಿವೆಯಲ್ಲಿ 8 ಗಂಟೆಗಳ ಅವಧಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಜೂ.13 ರಂದು ದೋಡಾ ಹಾಗೂ ಕಿಶ್ತ್ವಾರ್ ಗಳಲ್ಲಿ ಭೂಕಂಪ ಸಂಭವಿಸಿ ರಿಕ್ಟಾರ್ ಮಾಪಕದಲ್ಲಿ 5 ತೀವ್ರತೆ ದಾಖಲಾಗಿತ್ತು. ಇದರಿಂದಾಗಿ ಹಲವಾರು ನಾಗರಿಕ ಕಟ್ಟಡಗಳಿಗೆ ಹಾನಿಗೀಡಾಗಿತ್ತು. ಮಧ್ಯಾಹ್ನ 2.03 ಗಂಟೆಗೆ ಸಂಭವಿಸಿದ 3.0 ತೀವ್ರತೆಯ ಕಂಪನದ ಕೇಂದ್ರಬಿಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಾದ್ಯಂತ ಇರುವ ಗುಡ್ಡಗಾಡು ಜಿಲ್ಲೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕಂಪದ ಆಳ 33.31 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 75.19 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ಮೈಯಿಂದ ಐದು ಕಿಲೋಮೀಟರ್ ಕೆಳಗೆ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 33.04 ಉತ್ತರ ಅಕ್ಷಾಂಶ ಮತ್ತು 75.70 ಡಿಗ್ರಿ ಪೂರ್ವ ರೇಖಾಂಶದೊಂದಿಗೆ 18 ಕಿಮೀ ಆಳದಲ್ಲಿ ಪ್ರಬಲವಾದ 4.4 ತೀವ್ರತೆಯ ಭೂಕಂಪವು ರಾತ್ರಿ 9.55 ರ ಸುಮಾರಿಗೆ ದೋಡಾ ಜಿಲ್ಲೆಯನ್ನು ಅಪ್ಪಳಿಸಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಕಳೆದ ಐದು ದಿನಗಳಲ್ಲಿ ದೋಡಾ ಜಿಲ್ಲೆಯಲ್ಲಿ ಇದು ಏಳನೇ ಭೂಕಂಪವಾಗಿದೆ.

SCROLL FOR NEXT