ದೇಶ

'ಆದಿಪುರುಷ' ಚಿತ್ರದಲ್ಲಿ ಧಾರ್ಮಿಕ ನಾಯಕರ ಪಾತ್ರಗಳು ಆಕ್ಷೇಪಾರ್ಹ: ದೆಹಲಿ ಹೈಕೋರ್ಟ್ ನಲ್ಲಿ ಹಿಂದೂ ಸೇನೆ ಪಿಐಎಲ್

Nagaraja AB

ನವದೆಹಲಿ: ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ್' ಚಿತ್ರದ ಸಾರ್ವಜನಿಕ ಪ್ರದರ್ಶನಕ್ಕೆ ಪ್ರಮಾಣ ಪತ್ರ ನೀಡಬಾರದು ಎಂದು ಮನವಿ ಮಾಡಿ ಹಿಂದೂ ಸೇನೆ ದೆಹಲಿ ಹೈಕೋರ್ಟ್ ನಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಹಿಂದೂ ಸೇನೆ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ, ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸಂವಿಧಾನದ 226ರ ವಿಧಿ ಅನ್ವಯ ಧಾರ್ಮಿಕ ನಾಯಕರು, ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸಿರುವ ಅಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಬೇಕು, ನೈಜ ಅಂಶಗಳಿಲ್ಲದೆ ಚಿತ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡದಂತೆ ನ್ಯಾಯಾಲಯ ಆದೇಶ ಹೊರಡಿಸಬೇಕೆಂದು ಎಂದು ಅರ್ಜಿಯಲ್ಲಿ ಕೋರಲಾಗಿದೆ. 

ಮಹರ್ಷಿ ವಾಲ್ಮೀಕಿ, ಸಂತ ತುಳಸಿದಾಸ್ ಮತ್ತಿತರ ಲೇಖಕರು ಬರೆದಿರುವ ರಾಮಾಯಣದಲ್ಲಿನ ಹಿಂದೂ ನಾಯಕರ ಪಾತ್ರಗಳನ್ನು ಕೆಟ್ಟದಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಈ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. 

ಆದಿಪುರುಷ್ ಚಿತ್ರವನ್ನು ಓಂ ರಾವುತ್ ಅವರು ನಿರ್ದೇಶಿಸಿದ್ದಾರೆ. ಭೂಷಣ್ ಕುಮಾರ್ ನಿರ್ಮಿಸಿರುವ ಈ ಸಿನಿಮಾ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದೆ. ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸನ್ನಿಸಿಂಗ್ ಲಕ್ಷ್ಮಣನಾಗಿ ನಟಿಸಿದ್ದಾರೆ. ಸೈಫ್ ಆಲಿಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

SCROLL FOR NEXT