ಒಡಿಶಾದ ರಾಯಗಢದಲ್ಲಿ ಹಳಿತಪ್ಪಿದ ಗೂಡ್ಸ್ ರೈಲಿನ ನಾಲ್ಕು ಭೋಗಿಗಳು 
ದೇಶ

ಒಡಿಶಾ: ಹಳಿತಪ್ಪಿದ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು, ಬಾಲಸೋರ್‌ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ

ಒಡಿಶಾದ ರಾಯಗಢ ಜಿಲ್ಲೆಯ ಅಂಬೋಡಾಲ ಯಾರ್ಡ್‌ನಲ್ಲಿರುವ ವೇದಾಂತ ಲಿಮಿಟೆಡ್‌ನ ಘಟಕಕ್ಕೆ ತೆರಳುತ್ತಿದ್ದಾಗ ಶನಿವಾರ ಸರಕು ಸಾಗಣೆ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ. ಘಟನೆ ಬಗ್ಗೆ ಪೂರ್ವ ಕರಾವಳಿ ರೈಲ್ವೆಯಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಭುವನೇಶ್ವರ: ಒಡಿಶಾದ ರಾಯಗಢ ಜಿಲ್ಲೆಯ ಅಂಬೋಡಾಲ ಯಾರ್ಡ್‌ನಲ್ಲಿರುವ ವೇದಾಂತ ಲಿಮಿಟೆಡ್‌ನ ಘಟಕಕ್ಕೆ ತೆರಳುತ್ತಿದ್ದಾಗ ಶನಿವಾರ ಸರಕು ಸಾಗಣೆ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ. ಘಟನೆ ಬಗ್ಗೆ ಪೂರ್ವ ಕರಾವಳಿ ರೈಲ್ವೆಯಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಒಡಿಶಾದ ರಾಯಗಢದ ಅಂಬಾಡೋಲಾದಿಂದ ವಿಶೇಷ ಮಾರ್ಗದಲ್ಲಿ ಈ ಗೂಡ್ಸ್ ರೈಲು ಘಟಕಕ್ಕೆ ತೆರಳುತ್ತಿತ್ತು.

ಒಡಿಶಾದ ಬಾಲಸೋರ್‌ನಲ್ಲಿ ಕನಿಷ್ಠ 291 ಜನರು ಸಾವಿಗೀಡಾದ ತ್ರಿವಳಿ ರೈಲು ಅಪಘಾತದ ಕೆಲವು ವಾರಗಳ ನಂತರ ಈ ಅಪಘಾತ ಸಂಭವಿಸಿದೆ. ಜೂನ್ 2 ರಂದು ನಡೆದ ಈ ದುರಂತ ಘಟನೆಯಲ್ಲಿ ಚೆನ್ನೈ- ಕೋರಮಂಡಲ್ ಎಕ್ಸ್‌ಪ್ರೆಸ್, ಹೌರಾ- ಶಾಲಿಮಾರ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ.

ಈಮಧ್ಯೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೂನ್ 21ರಂದು ಒಡಿಶಾದ ಬಾಲಸೋರ್‌ಗೆ ಭೇಟಿ ನೀಡಲಿದ್ದು, ರೈಲು ಅಪಘಾತದ ಕಠಿಣ ಸಮಯದಲ್ಲಿ ರಕ್ಷಣೆಗೆ ಬಂದ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಭೇಟಿಯಾಗಿ ಧನ್ಯವಾದ ಹೇಳಲಿದ್ದಾರೆ.

ರೈಲ್ವೆ ಸಚಿವರು ಈ ಪ್ರದೇಶದ ಸಾರ್ವಜನಿಕ ಆಡಳಿತ ಇಲಾಖೆಯನ್ನು ಭೇಟಿ ಮಾಡಲಿದ್ದಾರೆ ಮತ್ತು ಉದಾರವಾಗಿ ನೆರವು ನೀಡಿದ ಸ್ಥಳೀಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲು ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 291ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT